ಮಡಿಕೇರಿ, ಫೆ. 2: ಇತ್ತೀಚೆಗೆ ನಗರದ ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯಲ್ಲಿ ಜಿಲ್ಲಾಮಟ್ಟದ ಅಂತರ್‍ಶಾಲಾ ಚರ್ಚಾ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು ಜಿಲ್ಲೆಯ ಹತ್ತು ಶಾಲೆಗಳು ಭಾಗವಹಿಸಿದ್ದವು. ಈ ಸ್ಪರ್ಧೆಯಲ್ಲಿ ಕೂರ್ಗ್ ಪಬ್ಲಿಕ್ ಶಾಲೆಯ ತಮನ್ನಾ ಅಪ್ಪಚ್ಚು ಮತ್ತು ರಿಯಾ ಗಂಗಮ್ಮ ಪ್ರಥಮ, ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯ ನಿಶ್ಚಲಾ ಬೋಪಯ್ಯ ಮತ್ತು ರಿಷಿಕಾ ಪಿ.ವೈ. ದ್ವಿತೀಯ ಮತ್ತು ಲೂಡ್ರ್ಸ್ ಹಿಲ್ ಪ್ರೌಢ ಶಾಲೆಯ ಜೋತ್ಸ್ನಾ ಆಂಟನಿ ಮತ್ತು ರಿಝಾ ಮರಿಯಮ್ ತೃತೀಯ ಬಹುಮಾನಗಳನ್ನು ಪಡೆದುಕೊಂಡರು. ಉತ್ತಮವಾಗಿ ಚರ್ಚಿಸಿದ ಗುಡ್ ಶೆಫರ್ಡ್ ಶಾಲೆಯ ಮಹಮ್ಮದ್ ಸಾಲಿಂ ಮತ್ತು ಜ್ಞಾನಗಂಗಾ ಶಾಲೆಯ ಕೋಯಲ್ ಚಂದ್ರೇಶ್ ಪ್ರೋತ್ಸಾಹಕರ ಬಹುಮಾನಗಳನ್ನು ಪಡೆದುಕೊಂಡರು. ಕಲಿಯಂಡ ಸರಸ್ವತಿ ಚಂಗಪ್ಪ ಬಹುಮಾನಗಳನ್ನು ಪ್ರಾಯೋಜಿಸಿದ್ದರು.