ಗೋಣಿಕೊಪ್ಪ ವರದಿ, ಫೆ. 1 : ಇಲ್ಲಿನ ಅಶ್ವಿನಿ ಸ್ಪೋಟ್ರ್ಸ್ ಫೌಂಡೇಶನ್ ವತಿಯಿಂದ 2018 ರ ಸಾಲಿನ ಹಾಕಿ ತರಬೇತಿಗೆ ಕ್ರೀಡಾಪಟುಗಳ ಆಯ್ಕೆ ಪ್ರಕ್ರಿಯೆ ತಾ. 23 ರಂದು ಪೊನ್ನಂಪೇಟೆಯ ಟರ್ಫ್ ಮೈದಾನದಲ್ಲಿ ಬೆಳಗ್ಗೆ 9 ಗಂಟೆಗೆ ನಡೆಯಲಿದೆ.12 ರಿಂದ 14 ವಯೋಮಿತಿಯ ಆಸಕ್ತ ಕ್ರೀಡಾಪಟುಗಳು ತಾ. 16 ರ ಒಳಗಾಗಿ ವೈದ್ಯಕೀಯ ಪ್ರಮಾಣಪತ್ರ, ಆಧಾರ್ ಕಾರ್ಡ್, ಭಾವಚಿತ್ರ ಹಾಗೂ ಜನನ ಪ್ರಮಾಣ ಪತ್ರಗಳೊಂದಿಗೆ ಅರ್ಜಿಯನ್ನು ಎ. ಕೆ. ಚೇತನ್, ಎಎಸ್ಎಫ್ ಹಾಕಿ ಕೋಚ್, ಅಶ್ವಿನಿ ಸ್ಪೋಟ್ರ್ಸ್ ಫೌಂಡೇಶನ್, ಪಿ. ಬಿ ಸಂಖ್ಯೆ 23, ಕೈಕೇರಿ ಅಂಚೆ, ಕೊಡಗು 571213 ವಿಳಾಸಕ್ಕೆ ಕಳುಹಿಸ ಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ 9980523443 ಸಂಪರ್ಕಿಸ ಬಹುದಾಗಿದೆ ಎಂದು ಅಶ್ವಿನಿ ಸ್ಪೋಟ್ರ್ಸ್ ಅಸೋಸಿಯೇಷನ್ ಪ್ರಕಟಣೆ ತಿಳಿಸಿದೆ.