ಮಡಿಕೇರಿ: ಚೆಯ್ಯಂಡಾಣೆಯ ನರಿಯಂದಡ ಕೇಂದ್ರ ವಿದ್ಯಾಸಂಸ್ಥೆಯ ಆಡಳಿತ ಮಂಡಳಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ನಡಿಕೇರಿಯಂಡ ಎಂ. ಸೋಮಯ್ಯ, ಉಪಾಧ್ಯಕ್ಷರಾಗಿ ಚೇನಂಡ ಎಂ. ಸುರೇಶ್ ನಾಣಯ್ಯ, ಸಂಚಾಲಕರು ಮತ್ತು ಕಾರ್ಯದರ್ಶಿಯಾಗಿ ಚೇನಂಡ ಈ. ಗಿರೀಶ್ ಪೂಣಚ್ಚ ಹಾಗೂ ಖಜಾಂಚಿಯಾಗಿ ಬೊವ್ವೇರಿಯಂಡ ಎಂ. ಲವಕುಮಾರ್ ಆಯ್ಕೆಯಾಗಿದ್ದಾರೆ.
ನಿರ್ದೇಶಕರಾಗಿ ಚೇನಂಡ ಸಿ. ಬೋಪಯ್ಯ, ಐತಿಚಂಡ ಬಿ. ಭೀಮಯ್ಯ, ಚಲ್ಮಂಡ ಎಸ್. ಚರ್ಮಣ್ಣ, ಪಾಲೆಯಂಡ ಎಸ್. ಮಂದಣ್ಣ, ಬಟ್ಟಿಯಂಡ ಎ. ಜಯರಾಂ, ಪೊಕ್ಕುಳಂಡ್ರ ಡಿ. ಮನೋಜ್ ಕುಮಾರ್, ಮುಂಡ್ಯೋಳಂಡ ಪಿ. ಸೋಮಣ್ಣ, ಬೊವ್ವೇರಿಯಂಡ ಸಿ. ಮೊಣ್ಣಪ್ಪ, ಬಟ್ಟಿಯಂಡ ಪಿ. ಮಾದಪ್ಪ, ಆರ್. ಮನೋಹರ ನಾಯ್ಕ್ (ಮುಖ್ಯ ಶಿಕ್ಷಕರು) ಇವರನ್ನು ಆಯ್ಕೆ ಮಾಡಲಾಯಿತು.
ಸನ್ಮಾನ
ನೂತನ ಆಡಳಿತ ಮಂಡಳಿ ರಚನಾ ಸಭೆಯಲ್ಲಿ 19 ವರ್ಷಗಳ ಸುದೀರ್ಘ ಅವಧಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಚೇನಂಡ ಸಿ. ಬೋಪಯ್ಯ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು. ನೂತನ ಆಡಳಿತ ಮಂಡಳಿ ಪದಾಧಿಕಾರಿಗಳು, ಪ್ರೌಢಶಾಲಾ ಮತ್ತು ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯ ಶಿಕ್ಷಕ ವೃಂದ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.