ಮಡಿಕೇರಿ: ಚಿತ್ರದುರ್ಗದ ಚಿಂತನ ಪ್ರಕಾಶನ ವತಿಯಿಂದ ಗಾಳಿಬೀಡು ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ನಡೆದ ನವೋದಯ ಕನ್ನಡ ಪರೀಕ್ಷೆಯಲ್ಲಿ ಗಾಳಿಬೀಡು ಶಾಲೆಯ ಐವತ್ತೆರಡು ವಿದ್ಯಾರ್ಥಿಗಳು ಭಾಗವಹಿಸಿ ಎಲ್ಲರೂ ಉತ್ತೀರ್ಣರಾಗಿದ್ದು ನವ್ಯ ಕೆ.ಎ. ರಾಜ್ಯಮಟ್ಟದ ರ್ಯಾಂಕ್, ನೂತನ್ ಕುಮಾರ್ ಮತ್ತು ಟೀನ ಬಿ.ಸಿ. ಜಿಲ್ಲಾಮಟ್ಟದ ರ್ಯಾಂಕ್ ಬಿಂದು ಕೆ.ಹೆಚ್. ಮತ್ತು ಶ್ರೇಯಾ ಕೆ.ಪಿ. ತಾಲೂಕುಮಟ್ಟದ ರ್ಯಾಂಕ್‍ಗಳಿಸಿದ್ದಾರೆ. ಸಂಘಟನಾ ಶಿಕ್ಷಕಿಯಾಗಿ ಗ್ರೆಟ್ಟಾ ಮೋನಿಸ್ ಮತ್ತು ಮಾರ್ಗದರ್ಶಕರಾಗಿ ಪ್ರಬಾರ ಮುಖ್ಯ ಶಿಕ್ಷಕಿ ಸಿ.ಪಿ. ಗಾಯತ್ರಿದೇವಿ ಕಾರ್ಯನಿರ್ವಹಿಸಿದರು.