ಸೋಮವಾರಪೇಟೆ, ಫೆ. 1: ತಾಲೂಕಿನ ಕಿರಗಂದೂರು ಗ್ರಾಮದಲ್ಲಿ ಕಾಫಿ ಕಳವು ಮಾಡಿದ ಈರ್ವರು ಆರೋಪಿಗಳನ್ನು ಇಲ್ಲಿನ ಅಪರಾಧ ವಿಭಾಗದ ಪೊಲೀಸರು ಬಂಧಿಸಿದ್ದಾರೆ.
ಕಿರಗಂದೂರು ಗ್ರಾಮದ ಜಾನಕಿ ಶಿವದಾಸ್ ಅವರ ಮನೆಯ ಕಣದಲ್ಲಿ ಒಣಗಿಸಲು ಹಾಕಿದ್ದ 60 ಕೆ.ಜಿ. ಪಾರ್ಚ್‍ಮೆಂಟ್ ಕಾಫಿಯನ್ನು ಅದೇ ಗ್ರಾಮದ ಪ್ರದೀಪ್ ಮತ್ತು ಯೋಗೇಶ್ ಕಳವು ಮಾಡಿದ್ದರು. ಈ ಕುರಿತು ಜಾನಕಿ ಅವರು ಸೋಮವಾರಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ ಹಿನ್ನೆಲೆಯಲ್ಲಿ ಆರೋಪಿಗಳನ್ನು ಬಂಧಿಸಿ, ಮೊಕದ್ದಮೆ ದಾಖಲಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಅಪರಾಧ ವಿಭಾಗದ ಸಬ್‍ಇನ್ಸ್‍ಪೆಕ್ಟರ್ ಮಂಚಯ್ಯ, ಸಿಬ್ಬಂದಿಗಳಾದ ಮಧು, ಶಿವಕುಮಾರ್, ಬಿ.ಪ್ರವೀಣ್ ಪಾಲ್ಗೊಂಡಿದ್ದರು.