ವೀರಾಜಪೇಟೆ: ವೀರಾಜಪೇಟೆಯ ಸೈಂಟ್ ಆನ್ಸ್ ಪದವಿ ಕಾಲೇಜಿನಲ್ಲಿ ಮತದಾರರ ದಿನಾಚರಣೆಯನ್ನು ಆಚರಿಸಲಾಯಿತು. ಪ್ರಾಂಶುಪಾಲ ಐಸಕ್ ರತ್ನಾಕರ್ ಈ ಸಂಬಂಧ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. ತದನಂತರ ಹೊಸದಾಗಿ ಮತದಾನದ ಹಕ್ಕನ್ನು ಪಡೆದಿರುವ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ವ್ಯಕ್ತಿಯ ಬದುಕಿನಲ್ಲಿ ಮಾಡುತ್ತಿರುವ ಮಹತ್ತರ ಕರ್ಮ ಮತದಾನವೆಂಬುದಾಗಿದೆ. ಯುವಕರು ಈ ಪ್ರಜ್ಞೆಯೊಂದಿಗೆ ತಮ್ಮ ಮತವನ್ನು ಚಲಾಯಿಸಬೇಕು ಎಂದರು. ರಾಷ್ಟ್ರೀಯ ಸೇವಾ ಯೋಜನೆ ಅಧಿಕಾರಿ ಅರ್ಜುನ್ ವಂದಿಸಿದರು.