ಮಡಿಕೇರಿ, ಜ. 31: ಬೀದರ್ ಜಿಲ್ಲೆಯ ಬಾಲ್ಕಿ ಎಂಬಲ್ಲಿ ವಿದ್ಯಾರ್ಥಿನಿ ಪೂಜಾಳನ್ನು ಅತ್ಯಾಚಾರ ಎಸಗಿ ಕೊಲೆ ಮಾಡಿರುವ ಘಟನೆಯನ್ನು ಖಂಡಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ನಗರದಲ್ಲಿ ಮೆರವಣಿಗೆ ನಡೆಸಿ ಆರೋಪಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಲಾಯಿತು.
ಎ.ಬಿ.ವಿ.ಪಿ. ಜಿಲ್ಲಾ ಸಹ ಸಂಚಾಲಕ ಸುಭಾಷ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.