ಕುಶಾಲನಗರ, ಜ. 31 : ಕುಶಾಲನಗರದಲ್ಲಿ ಅಕ್ರಮವಾಗಿ ಮರ ಸಾಗಿಸುತ್ತಿದ್ದ ಸಂದರ್ಭ ಅರಣ್ಯ ಇಲಾಖೆ ಅಧಿಕಾರಿಗಳು ಪತ್ತೆಹಚ್ಚಿ ಲಾರಿ ಸೇರಿದಂತೆ ಕಾಡು ಜಾತಿಯ ಮರಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಕಾರ್ಯಾಚರಣೆ ಸಂದರ್ಭ ಚಾಲಕ ಲಾರಿಯಿಂದ ಇಳಿದು ಪರಾರಿಯಾಗಿದ್ದಾನೆ ಎಂದು ಆನೆಕಾಡು ಉಪ ವಲಯ ಅರಣ್ಯಾಧಿ ಕಾರಿ ಕೆ.ಪಿ.ರಂಜನ್ ತಿಳಿಸಿದ್ದಾರೆ.

ಮಂಗಳವಾರ ಸಂಜೆ ವೇಳೆ ಕುಶಾಲನಗರ ಪಟ್ಟಣ ವ್ಯಾಪ್ತಿಯಲ್ಲಿ (ಕೆಎ.19.ಬಿ.6565) ನೋಂದಣಿಯ ಲಾರಿಯಲ್ಲಿ ಮರ ಸಾಗಾಟ ಸಂದರ್ಭ ಸಂಶಯಗೊಂಡ ಅಧಿಕಾರಿ ಮತ್ತು ಸಿಬ್ಬಂದಿ ಪರಿಶೀಲಿಸಿದ ಸಂದರ್ಭ ಕಾಡು ಜಾತಿಯ ಮರದ ನಾಟಾಗಳು ಕಂಡುಬಂದಿದೆ. ಲಾರಿಯಲ್ಲಿದ್ದ ಅಂದಾಜು 2.5 ಲಕ್ಷ ಮೌಲ್ಯದ ನಾಟಾಗಳು ಮತ್ತು ಅಂದಾಜು 5 ಲಕ್ಷ ರೂ. ಮೌಲ್ಯದ ಲಾರಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದ್ದಾರೆ.

ಕುಶಾಲನಗರ ಅರಣ್ಯ ವಲಯಾಧಿಕಾರಿ ಸಿ.ಆರ್.ಅರುಣ್ ನೇತೃತ್ವದಲ್ಲಿ ಉಪ ವಲಯ ಅರಣ್ಯಾಧಿಕಾರಿ ಕೆ.ಪಿ.ರಂಜನ್, ಚಾಲಕ ಸತೀಶ್ ನಾರಾಯಣ್ ಕಾರ್ಯಾ ಚರಣೆಯಲ್ಲಿ ಪಾಲ್ಗೊಂಡಿದ್ದರು.