ನಾಪೆÇೀಕ್ಲು, ಜ. 30: ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಬಲಮುರಿ ಮತ್ತು ನಾಪೆÇೀಕ್ಲುವಿಗೆ ಸಂಪರ್ಕ ಕಲ್ಪಿಸುವ ಮಕ್ಕಿಕಡು ಸೇತುವೆಯನ್ನು ಉದ್ಘಾಟಿಸಿದರು.ನಂತರ ಮಾತನಾಡಿದ ಅವರು ಮಕ್ಕಿಕಡು ಸೇತುವೆ ಈ ವ್ಯಾಪ್ತಿಯ ಜನರ ಬಹುದಿನದ ಬೇಡಿಕೆಯಾಗಿತ್ತು. 2011 ರಲ್ಲಿ ರಾಜ್ಯಸಭಾ ಸದಸ್ಯೆ ಹೇಮಮಾಲಿನಿ ರೂ. 20ಲಕ್ಷ ಮಂಜೂರು ಮಾಡುವ ಮೂಲಕ ಈ ಸೇತುವೆ ಕಾಮಗಾರಿ ಆರಂಭಿಸಲಾ ಯಿತು. ಇತರ ಹಣವನ್ನು ಬೇರೆ, ಬೇರೆ ಸಂಪನ್ಮೂಲಗಳ ಕ್ರೋಢೀಕರಣದಿಂದ ಒದಗಿಸಲಾಯಿತು. ಅಧಿಕಾರಿಗಳ ಬೇಜವಾಬ್ದಾರಿ ಮತ್ತು ಗುತ್ತಿಗೆದಾರ ರಿಂದ ಸೇತುವೆ ಕಾಮಗಾರಿ ವಿಳಂಬ ವಾಯಿತು. ಇನ್ನುಳಿದ ತಡೆಗೋಡೆ ಕಾಮಗಾರಿಯನ್ನು ಶೀಘ್ರದಲ್ಲಿಯೇ ಮುಗಿಸಲಾಗುವದು ಎಂದರು. ಈ ಸೇತುವೆ ನಿರ್ಮಾಣ ದಿಂದ ಹೋಬಳಿ ಕೇಂದ್ರ ತಲುಪಲು ಬಲಮುರಿ ಗ್ರಾಮಸ್ಥರಿಗೆ ನಾಲ್ಕು ಕಿ.ಮೀ. ಪ್ರಯಾಣಿಸಿದರೆ ಸಾಕು, ಇಲ್ಲವಾದರೆ 12 ಕಿ.ಮೀ. ದೂರವಾಗು ತಿತ್ತು, ಇಲ್ಲಿಯೇ ಇರುವ ಮಕ್ಕಿ ಶ್ರೀ ಶಾಸ್ತಾವು ದೇವಳಕ್ಕೆ ಬರುವ ಭಕ್ತರಿಗೂ ಸೇತುವೆ ಪ್ರಯೋಜನವಾಗಲಿದೆ ಎಂದರು.
ಮಡಿಕೇರಿ ತಾ.ಪಂ. ಅಧ್ಯಕ್ಷೆ ತೆಕ್ಕಡೆ ಶೋಭಾ ಮೋಹನ್, ಉಪಾಧ್ಯಕ್ಷ ಬೊಳಿಯಾಡಿರ ಸಂತು ಸುಬ್ರಮಣಿ, ಸದಸ್ಯೆ ನೆರೆಯಂಡಮ್ಮಂಡ ಉಮಾಪ್ರಭು, ಜಿ.ಪಂ. ಮಾಜಿ ಉಪಾಧ್ಯಕ್ಷೆ ಬಿದ್ದಂಡ ಉಷಾ ದೇವಮ್ಮ, ತಾ.ಪಂ. ಮಾಜಿ ಸದಸ್ಯ ಬೊಳ್ಳಚೆಟ್ಟಿರ ಸುರೇಶ್, ಪಾರಾಣೆ ಬಿಜೆಪಿ ಸ್ಥಾನೀಯ ಸಮಿತಿ ಅಧ್ಯಕ್ಷ ಚಂಗಂಡ ಸೂರಜ್ ತಿಮ್ಮಯ್ಯ, ನಾಪೆÇೀಕ್ಲು ಬಿಜೆಪಿ ಸ್ಥಾನೀಯ ಸಮಿತಿ ಅಧ್ಯಕ್ಷ ಶಿವಚಾಳಿಯಂಡ ಅಂಬಿ ಕಾರ್ಯಪ್ಪ, ಅಪ್ಪನೆರವಂಡ ರಾಜಾ ಪೂವಯ್ಯ, ಬೊಳ್ಳಚೆಟ್ಟಿರ ಪ್ರಕಾಶ್, ಗುಡ್ಡೇರ ಡಿ.ಕೃಷ್ಣಯ್ಯ, ಬೊಳ್ಳಚೆಟ್ಟಿರ ಯಮುನಾ, ಪೆÇನ್ನಚ್ಚನ ಕುಟ್ಟಪ್ಪ, ಸುರೇಶ್, ಲಕ್ಷು ಮತ್ತಿತರರು ಇದ್ದರು.