ಗೋಣಿಕೊಪ್ಪಲು, ಜ. 31: ಇತ್ತೀಚೆಗೆ ಬಿಟ್ಟಂಗಾಲ ಗಾಲ್ಫ್ ಲಿಂಕ್‍ನಲ್ಲಿ ಚೆಪ್ಪುಡೀರ ನಿಕ್ಕಿ ಪೊನ್ನಪ್ಪ ಅವರು ಆಯೋಜಿಸಿದ ಗಾಲ್ಫ್ ಪಂದ್ಯಾವಳಿಯಲ್ಲಿ ವೀರಾಜಪೇಟೆ ಕಾವೇರಿ ಶಾಲೆಯ ವಿದ್ಯಾರ್ಥಿಗಳಾದ ಪುಚ್ಚಿಮಂಡ ನೀಲ್ ನಾಣಯ್ಯ ಕೌಶಲ್ಯ ವಿಭಾಗದಲ್ಲಿ ಪ್ರಥಮ ಹಾಗೂ ದಿಶಾಲ್ ಕೆ.ಎ. ಉತ್ತಮ ಆಟಗಾರ ಪ್ರಶಸ್ತಿಯನ್ನು ಪಡೆದಿದ್ದಾರೆ.
ಪ್ರಾಶುಂಪಾಲ ಪಿ.ಎನ್. ವಿನೋದ್, ಮುಖ್ಯ ಶಿಕ್ಷಕಿ ಬಿ.ಯು. ಪೊನ್ನಮ್ಮ ಹಾಗೂ ಸಹ ಶಿಕ್ಷಕಿ ನಿರೀಕ್ಷ ಎ.ಪಿ. ಹಾಜರಿದ್ದರು.