ಕುಶಾಲನಗರ, ಜ. 30 : ಅಪ್ಪಚ್ಚು ಗೆಳೆಯರ ಬಳಗದ ವತಿಯಿಂದ ಕುಶಾಲನಗರದಲ್ಲಿ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಕುಶಾಲನಗರದ ಮ್ಯಾಕ್ಸ್‍ವೆಲ್ ತಂಡ ಪ್ರಥಮ ಸ್ಥಾನ ಗಳಿಸಿತು. ದ್ವಿತೀಯ ಸ್ಥಾನವನ್ನು ಮೈಸೂರಿನ ಎನ್‍ಲಿವಿನ್ ತಂಡ ತಮ್ಮದಾಗಿಸಿತು.

ಎರಡು ದಿನಗಳ ಕಾಲ ನಡೆದ ರಾಜ್ಯಮಟ್ಟದ ಪಂದ್ಯಾವಳಿಯಲ್ಲಿ ಜಿಲ್ಲೆ ಸೇರಿದಂತೆ ವಿವಿಧ ಭಾಗಗಳ 20 ತಂಡಗಳು ಪಾಲ್ಗೊಂಡಿದ್ದವು. ಪ್ರಥಮ ಸ್ಥಾನ ವಿಜೇತರಿಗೆ 40 ಸಾವಿರ ನಗದು ಹಾಗೂ ಟ್ರೋಫಿಯನ್ನು ಹಾಗೂ ದ್ವಿತೀಯ ಸ್ಥಾನ ಗಳಿಸಿದ ತಂಡಕ್ಕೆ ರೂ. 30 ಸಾವಿರ ನಗದು ಮತ್ತು ಟ್ರೋಫಿಯನ್ನು ಬಹುಮಾನವಾಗಿ ನೀಡಲಾಯಿತು.

ಈ ಸಂದರ್ಭ ನಡೆದ ಸಮಾರೋಪ ಸಮಾರಂಭದಲ್ಲಿ ಪ.ಪಂ. ಸದಸ್ಯರಾದ ಹೆಚ್.ಎಂ. ಮಧುಸೂದನ್, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಸಬಲಂ ಭೋಜಣ್ಣ ರೆಡ್ಡಿ, ಕಾವೇರಿ ನದಿ ಸ್ವಚ್ಛತಾ ಆಂದೋಲನದ ಎಂ.ಎನ್. ಚಂದ್ರಮೋಹನ್, ಪ್ರಾಂಶುಪಾಲ ಮೂರ್ತಿ, ಡಾ. ಸಂತೋಷ್, ಅಪ್ಪಚ್ಚು ಗೆಳೆಯರ ಬಳಗದ ಪ್ರಮುಖರು ಪಾಲ್ಗೊಂಡಿದ್ದರು.