ಗೋಣಿಕೊಪ್ಪ, ಜ. 30: ಕೇಂದ್ರ ಸರಕಾರದ ಮಾನವ ಸಂಪನ್ಮೂಲ ಸಚಿವಾಲಯದ ವತಿಯಿಂದ ನೀಡಲಾಗುತ್ತಿರುವ ಸ್ವಚ್ಛ ವಿದ್ಯಾಲಯ ಪ್ರಶಸ್ತಿಗೆ ಇಲ್ಲಿಗೆ ಸಮೀಪದ ಅತ್ತೂರುವಿನ ನ್ಯಾಷನಲ್ ಅಕಾಡೆಮಿ ಶಾಲೆಯು ಆಯ್ಕೆಯಾಗಿದೆ. ಎರಡು ವಿಭಿನ್ನ ಮಾನದಂಡಗಳಲ್ಲಿ ಶೇ.93 ಹಾಗೂ ಶೇ.100 ಅಂಕಗಳೊಂದಿಗೆ ‘ಎಕ್ಸೆಲೆಂಟ್’ ಗ್ರೇಡ್‍ನೊಂದಿಗೆ ಆಯ್ಕೆಯಾಗಿ ಮುಂದಿನ ಸುತ್ತು ಪ್ರವೇಶಿಸಿದೆ ಎಂದು ಶಾಲಾ ಸಂಸ್ಥಾಪಕಿ ಅಪ್ಪನೆರವಂಡ ಶಾಂತಿ ಅಚ್ಚಪ್ಪ ಹಾಗೂ ಪ್ರಾಂಶುಪಾಲರಾದ ಅರುಣ್ ಕುಮಾರ್ ಬಿ. ತಿಳಿಸಿದ್ದಾರೆ.