ಕುಶಾಲನಗರ, ಜ. 30 : ಕಾಗಿನೆಲೆ ಕನಕ ಗುರು ಪೀಠದ ರಜತ ಮಹೋತ್ಸವದ ಸವಿನೆನಪಿಗಾಗಿ ಹಮ್ಮಿಕೊಂಡಿರುವ ಬೆಳ್ಳಿಹಬ್ಬ ಕಾರ್ಯಕ್ರಮದ ಪ್ರಚಾರ ರಥ ಕುಶಾಲನಗರಕ್ಕೆ ಆಗಮಿಸಿತು. ರಾಜ್ಯಾದ್ಯಂತ ಸಂಚರಿಸುತ್ತಿರುವ ರಥ ಪಿರಿಯಾಪಟ್ಟಣ ಮೂಲಕ ಕುಶಾಲನಗರಕ್ಕೆ ಆಗಮಿಸಿದ ಸಂದರ್ಭ ಸ್ಥಳೀಯ ಪ್ರಮುಖರು ರಥವನ್ನು ಬರಮಾಡಿಕೊಂಡರು. ಪಟ್ಟಣದ ಪ್ರವಾಸಿ ಮಂದಿರದ ಆವರಣದಲ್ಲಿ ಸಾರ್ವಜನಿಕರಿಗೆ ಬೆಳ್ಳಿಹಬ್ಬ ಕಾರ್ಯಕ್ರಮದ ಕುರಿತು ಮಾಹಿತಿ ಒದಗಿಸಲಾಯಿತು.

ಇದೇ ಸಂದರ್ಭ ಪ್ರದೇಶ ಕುರುಬರ ಸಂಘದ ಅಧ್ಯಕ್ಷ ಕೆ.ಬಿ.ಶಾಂತಪ್ಪ ಮಾತನಾಡಿ, ಫೆ. 8, 9 ರಂದು ನಡೆಯಲಿರುವ ಬೆಳ್ಳಿಹಬ್ಬ ಕಾರ್ಯಕ್ರಮದ ಮಹತ್ವ ಮತ್ತು ಸಿದ್ಧತೆಗಳ ಬಗ್ಗೆ ಮಾಹಿತಿ ಒದಗಿಸಿದರು. ನಂತರ ರಥವನ್ನು ಸಕಲೇಶಪುರದತ್ತ ಬೀಳ್ಕೊಡಲಾಯಿತು.

ಈ ಸಂದರ್ಭ ಕಾಗಿನೆಲೆ ಕನಕಗುರು ಪೀಠದ ಕೆಆರ್ ನಗರ ಶಾಖಾ ಮಠದ ಶಿವಾನಂದಪುರಿ ಸ್ವಾಮೀಜಿ, ಧರ್ಮದರ್ಶಿ ಎಂ.ನಂಜುಂಡಸ್ವಾಮಿ, ಕೊಡಗು ಜಿಲ್ಲಾ ಅಧ್ಯಕ್ಷ ಮಹೇಶ್, ಪ್ರಧಾನ ಕಾರ್ಯದರ್ಶಿ ಬಿ.ಎ.ಗಂಗಾಧರ್, ಉಪಾಧ್ಯಕ್ಷರುಗಳಾದ ಸುರೇಶ್, ಗಣೇಶ್, ಖಜಾಂಚಿ ಶಿವಣ್ಣ, ಪ್ರಮುಖರಾದ ಚಂದ್ರಶೇಖರ್, ದಿನೇಶ್, ಕಮಲಮ್ಮ, ರಾಧಾ, ವಸಂತ, ಪ್ರತಾಪ್ ಮತ್ತಿತರರು ಇದ್ದರು.