ಶ್ರೀಮಂಗಲ, ಜ. 31: ನಾಗರಹೊಳೆ ವಲಯ ಅರಣ್ಯ ವ್ಯಾಪ್ತಿಯಲ್ಲಿ 3-4 ವಯಸ್ಸಿನ ಗಂಡು ಹುಲಿ ಸಾವಿಗೀಡಾಗಿದೆ. ಮತ್ತೊಂದು ಹುಲಿಯೊಂದಿಗೆ ಕಾದಾಟದ ವೇಳೆ ತೀವ್ರ ಗಾಯಗೊಂಡು ಹುಲಿ ಸತ್ತಿರುವದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ.ನಾಗರಹೊಳೆಯಿಂದ ಸುಂಕದ ಕಟ್ಟೆಗೆ ತೆರಳುವ ದಾರಿಯಲ್ಲಿ ಹುಲಿ ಸತ್ತಿರುವದು ಪತ್ತೆಯಾಗಿದೆ. ಹುಲಿಯ ತಲೆ ಹಾಗೂ ಕೈ ಭಾಗ ಹೊರತುಪಡಿಸಿ ದೇಹದ ಇತರ ಭಾಗ ಸಂಪೂರ್ಣವಾಗಿ ಕೊಳೆತು ಹೋಗಿದೆ. ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿರುವ ಹುಲಿಯ ಕಳೆಬರದಲ್ಲಿ
ನಾಗರಹೊಳೆಯಲ್ಲಿ ಹುಲಿ ಸಾವು (ಮೊದಲ ಪುಟದಿಂದ) ಕೊರಳು, ಮುಖ, ಹಕ್ಕು, ಕೈ ಹಾಗೂ ದೇಹದ ಹಲವು ಭಾಗದಲ್ಲಿ ಮತ್ತೊಂದು ಹುಲಿ ಧಾಳಿ ನಡೆಸಿ ಆಳವಾದ ಗಾಯ ಮಾಡಿರುವ ಗುರುತು ಪತ್ತೆಯಾಗಿದೆ.
ಅರಣ್ಯ ಇಲಾಖೆಯ ಸಿಎಫ್ ಮಣಿಕಂದನ್, ನಾಗರಹೊಳೆ ಎಸಿಎಫ್ ಪೌಲ್ ಆಂಥೋಣಿ, ಆರ್ಎಫ್ಓ ರವೀಂದ್ರ, ಎನ್ಡಿಸಿಎ ರಾಜಕುಮಾರ್, ನಾಗರಾಜ್ ಭಟ್, ವನ್ಯಜೀವಿ ವಾರ್ಡನ್ ಕುಂಞಂಗಡ ಬೊಸ್ ಮಾದಪ್ಪ, ಅವರ ಸಮ್ಮುಖದಲ್ಲಿ ಮಹಜರು ನಡೆಯಿತು. ವನ್ಯಜೀವಿ ವೈದ್ಯಾಧಿಕಾರಿ ಡಾ. ಮಜೀಬ್ ಮರಣೋತ್ತರ ಪರೀಕ್ಷೆ ನಡೆಸಿದರು.