ಒಡೆಯನಪುರ, ಜ. 31: ಶನಿವಾರಸಂತೆ ಶ್ರೀ ಮಂಜುನಾಥಸ್ವಾಮಿ ಪಾದಯಾತ್ರಾ ಸಮಿತಿ ವತಿಯಿಂದ ಫೆ. 13 ರಂದು ನಡೆಯಲಿರುವ ಮಹಾ ಶಿವರಾತ್ರಿ ಹಬ್ಬದ ಪ್ರಯುಕ್ತ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ 20ನೇ ವರ್ಷದ ಪಾದಯಾತ್ರೆ ಕಾರ್ಯಕ್ರಮ ಫೆ. 10 ರಿಂದ 13 ರ ವರೆಗೆ ನಡೆಯಲಿದೆ ಎಂದು ಸಮಿತಿಯ ಪ್ರಕಟಣೆ ತಿಳಿಸಿದೆ.
ಬೆಳಿಗ್ಗೆ 8.30 ಗಂಟೆಗೆ ಪಟ್ಟಣದ ಶ್ರೀ ಗಣಪತಿ ದೇವಾಲಯದಲ್ಲಿ ಶ್ರೀ ವಿನಾಯಕಸ್ವಾಮಿಗೆ ಪೂಜೆ ಸಲ್ಲಿಸಿದ ನಂತರ ಪಾದಯಾತ್ರಿಗಳು ಬೆಳಿಗ್ಗೆ 9 ಗಂಟೆಯಿಂದ ಪಾದಯಾತ್ರೆ ಕೈಗೊಳ್ಳುತ್ತಾರೆ. ಪಾದಯಾತ್ರೆಯ ಶನಿವಾರಸಂತೆ ಚಂಗಡಹಳ್ಳಿ, ಬಿಸ್ಲೆ, ಕೂಡುರಸ್ತೆ, ಸುಬ್ರಮಣ್ಯ, ಕೊಕ್ಕಡ ಮಾರ್ಗವಾಗಿ ಧರ್ಮಸ್ಥಳಕ್ಕೆ ತೆರಳಲಿದೆ. ಪಾದಯಾತ್ರೆಗೆ ಬರಲು ಇಚ್ಚಿಸುವ ಪಾದಯಾತ್ರಿಗಳು 9448919518, 9480701238 ಇವರುಗಳನ್ನು ಸಂಪರ್ಕಿಸಬಹುದು.