ಸಿದ್ದಾಪುರ, ಜ. 31: ಸಮೀಪದ ಗುಹ್ಯ ಗ್ರಾಮದ ಕೂಡುಗದ್ದೆಯಲ್ಲಿರುವ ಬಿಲಾಲ್ ಜುಮಾ ಮಸೀದಿ ವಾರ್ಷಿಕೋತ್ಸವ ಹಾಗೂ ದಿಖ್ರ್ ದುಆ ಮಜ್ಲಿಸ್ ಧಾರ್ಮಿಕ ಕಾರ್ಯಕ್ರಮ ನಡೆಯಿತು. ಗುಹ್ಯ ತರೆಬಿಯತ್ತುಲ್ ಇಸ್ಲಾಂ ಸಮಿತಿ ನೇತೃತ್ವದಲ್ಲಿ ಅಧ್ಯಕ್ಷ ಸಿ.ಯು ಮುಸ್ತಫ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ ಕೆ.ಎಂ ಇಬ್ರಾಹಿಂ ಮಾತನಾಡಿದರು. ವಕ್ಫ್ ಬೋರ್ಡ್ ಮಾಜಿ ಅಧ್ಯಕ್ಷ ಹಮೀದ್ ಮಾತನಾಡಿ, ದಿಖ್ರ್ ದುಆ ಮಜ್ಲಿಸ್ ಧಾರ್ಮಿಕ ಕಾರ್ಯಕ್ರಮ ಅಲ್ಪಸಂಖ್ಯಾತ ಸಮುದಾಯಕ್ಕೆ ಅವಶ್ಯಕತೆ ಇದೆ ಎಂದರು.
ಧಾರ್ಮಿಕ ಕಾರ್ಯಕ್ರಮವನ್ನು ಗುಹ್ಯ ಮಸೀದಿಯ ಖತೀಬ್ ಉದ್ಘಾಟನೆ ಮಾಡಿದರು ಸಯ್ಯಿದ್ ಸೈನುದ್ದೀನ್ ಅಲ್ ಬುಖಾರಿ ಮತ್ತು ಮಳಾಹಿರಿ ಉಸ್ತಾದ್ ಮುಖ್ಯ ಪ್ರಭಾಷಣ ಮಾಡಿದರು.
ಕಾಂಗ್ರೆಸ್ ಅಲ್ಪಸಂಖ್ಯಾತ ರಾಜ್ಯ ಉಪಾಧ್ಯಕ್ಷ ಪಿ.ಸಿ. ಹಸೈನಾರ್ ಹಾಜಿ, ಸಿದ್ದಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ.ಕೆ ಮಣಿ, ಸಿದ್ದಾಪುರ ಮುಸ್ಲಿಂ ಜಮಾಅತ್ ಅಧ್ಯಕ್ಷ ಕೆ. ಉಸ್ಮಾನ್ ಹಾಜಿ, ಸದಸ್ಯರಾದ ರವೂಫ್ ಹಾಜಿ, ಮುಸ್ತಫ ಹಾಜಿ, ಗ್ರಾಮ ಪಂಚಾಯಿತಿ ಸದಸ್ಯ ರಜಿತ್ ಕುಮಾರ್, ಮತ್ತಿತರರು ಉಪಸ್ಥಿತರಿದ್ದರು.