ಸುಂಟಿಕೊಪ್ಪ, ಜ. 31: ಇಲ್ಲಿನ ಶ್ರೀ ಚಾಮುಂಡೇಶ್ವರಿ ಮತ್ತು ಮುತ್ತಪ್ಪ ದೇವಾಲಯದ ಜೀರ್ಣೋದ್ಧಾರ ಪ್ರಯುಕ್ತ ಸಮಿತಿಯ ವತಿಯಿಂದ ಫೆ. 1 ರಿಂದ 12 ರವರೆಗೆ ದುರ್ಗಾ ಪೂಜೆ ಮತ್ತು ಗಣಹೋಮ ನಡೆಯಲಿದೆ ಎಂದು ದೇವಾಲಯದ ಜೀರ್ಣೋದ್ಧಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ಡಿ. ನರಸಿಂಹ ತಿಳಿಸಿದ್ದಾರೆ. ಪ್ರತಿದಿನ ಬೆಳಿಗ್ಗೆ 6 ಗಂಟೆಯಿಂದ 7.30 ರವರೆಗೆ ಗಣಹೋಮ, ಸಂಜೆ 6 ರಿಂದ 8.30 ರವರೆಗೆ ದುರ್ಗಾ ಪೂಜೆ ಮತ್ತು ವಿಶೇಷ ಪೂಜೆಗಳು ದೇವಾಲಯದ ಆವರಣದಲ್ಲಿ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.