ಸೋಮವಾರಪೇಟೆ, ಜ.31: ಭಾಗಮಂಡಲ ಸಮೀಪದ ಅಯ್ಯಂಗೇರಿ ಗ್ರಾಮದ ಎ. ಕುಮಾರ್ ಎಂಬವರ ಮನೆಯೊಳಗೆ ಬೀಡುಬಿಟ್ಟಿದ್ದ ಬೃಹತ್ ಗಾತ್ರದ ಕಾಳಿಂಗ ಸರ್ಪವನ್ನು ಸೋಮವಾರಪೇಟೆಯ ಸ್ನೇಕ್ ರಘು ಅವರು ಹಿಡಿದು ಅಲ್ಲಿನ ಬಾಚಿಮಲೆ ವನ್ಯಜೀವಿ ಅರಣ್ಯಕ್ಕೆ ಬಿಡಲಾಯಿತು.
ಈ ಸಂದರ್ಭ ಸ್ನೆಕ್ ಬಿಪಿನ್ ಮತ್ತು ಅರಣ್ಯ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು. ಉರಗಗಳು ಕಂಡುಬಂದರೆ ಅವುಗಳನ್ನು ಕೊಲ್ಲದೇ ತಮಗೆ ಮಾಹಿತಿ ನೀಡಿದರೆ (ಮೊ: 9844558693) ಜನವಸತಿ ಪ್ರದೇಶದಿಂದ ಹಿಡಿದು ಅರಣ್ಯ ಪ್ರದೇಶಕ್ಕೆ ಬಿಡಲಾಗುವದು ಎಂದು ಸ್ನೇಕ್ ರಘು ಮಾಹಿತಿ ನೀಡಿದರು.