ಶ್ರೀಮಂಗಲ, ಜ. 29: ಹಿರಿಯ ಸಾಹಿತಿ ಶಿವರಾಮ ಕಾರಂತ್ ಹೇಳಿದಂತೆ ವ್ಯಕ್ತಿಗಳು ತಮ್ಮ ಜೀವಿತಾವಧಿಯಲ್ಲಿ ಏನಾದರು ಸಾಧÀನೆ ಮಾಡಿದರೆ ಮಾತ್ರ ಸಮಾಜದಲ್ಲಿ ತಮ್ಮ ಹೆಸರು ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ. ಸಾಹಿತ್ಯಕ್ಷೇತ್ರದಲ್ಲಿ ಸಾಧನೆ ಮಾಡಿದವರ ಹೆಸರು ಅಜರಾಮರವಾಗಿರುತ್ತದೆ ಎಂದು ಜಮ್ಮಡ ಬಬಿತ ಪ್ರವೀಣ್ ಅಭಿಪ್ರಾಯ ವ್ಯಕ್ತಪಡಿಸಿದರು.
ಕೊಡವತಕ್ಕ್ ಎಳ್ತ್‍ಕಾರಡ ಕೂಟ ಹಾಗೂ ಕೈಕೇರಿಯ ಭಗವತಿ ರಿಕ್ರಿಯೇಶನ್ ಸ್ಪೋಟ್ರ್ಸ್ ಅಸೋಸಿಯೇಶನ್‍ನ ಆಶ್ರಯದಲ್ಲಿ ನಡೆದ ವಿಶೇಷ ಕೊಡವ ಸಾಹಿತ್ಯ ಸಾಂಸ್ಕøತಿಕ ಕಾರ್ಯಕ್ರಮ ಹಾಗೂ ಮುದ್ದಿಯಡ ಕುಶ ಪೊನ್ನಪ್ಪ– ಕೈಬಿಲೀರ ಬೋಪಯ್ಯ ದತ್ತಿ ನಿಧಿ ಕಥೆ ಹಾಗೂ ಕವನ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಜನಪ್ರಿಯ ಕೊಡವ ಸಾಹಿತ್ಯ ಮಾಲೆ’ ಯೋಜನೆಯ 152ನೇ ಹೆಜ್ಜೆಯ ಲೇಖಕ ಬೊಜ್ಜಂಗಡ ನಿತಿನ್ ನಂಜಪ್ಪ ಬರೆದ ‘ಪೊನ್ನಾಡ್’ ಪುಸ್ತಕ ಬಿಡುಗಡೆ ಮಾಡಲಾಯಿತು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕೈಕೇರಿಯ ಭಗವತಿ ರಿಕ್ರಿಯೇಶನ್ ಸ್ಪೋಟ್ರ್ಸ್ ಅಸೋಸಿಯೇಶನ್‍ನ ಅಧ್ಯಕ್ಷ ಜಮ್ಮಡ ಅರಸು ಅಪ್ಪಣ್ಣ ಮಾತನಾಡಿ ಇಂದಿನ ಪೀಳಿಗೆಯ ಮಕ್ಕಳಿಗೆ ಕೊಡವ ಪದ್ಧತಿ, ಸಂಸ್ಕøತಿ ಆಚಾರ ವಿಚಾರ, ಹಬ್ಬ ಹರಿದಿನ, ಕೃಷಿಯ ಬಗ್ಗೆ ಯಾವದೇ ಮಾಹಿತಿ ಇಲ್ಲ ಎಂದು ವಿಷಾಧಿಸಿದರು.
ಕೈಬಿಲೀರ ಬೋಪಯ್ಯ ದತ್ತಿ ನಿಧಿಯ ಸ್ಥಾಪಕರಾದ ಕೈಬಿಲೀರ ಪಾರ್ವತಿ ಬೋಪಯ್ಯ ಮಾತನಾಡಿ ನಮ್ಮ ಮಾತೃ ಭಾಷೆಯ ಮೇಲೆ ಮಕ್ಕಳಿಗೆ ಅಭಿಮಾನ ಹಾಗೂ ಪ್ರೀತಿ ಹುಟ್ಟಿಸುವ ಜವಾಬ್ದಾರಿ ತಂದೆ-ತಾಯಿಗಳದ್ದೇ ಆಗಿದೆ ಎಂದರು.
ಪೊನ್ನಾಡ್ ಪುಸ್ತಕದ ಲೇಖಕ ಬೊಜ್ಜಂಗಡ ನಿತಿನ್ ನಂಜಪ್ಪ ಅನುಭವಗಳನ್ನು ಹಂಚಿಕೊಳ್ಳುತ್ತ ಭಾಷೆ ಸಾಹಿತ್ಯದ ಬೆಳವಣಿಗೆಗೆ ಸಹಕರಿಸಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೊಡವತಕ್ಕ್ ಎಳ್ತ್‍ಕಾರಡ ಕೂಟದ ಅಧ್ಯಕ್ಷ ಚೆಟ್ಟಂಗಡ ರವಿ ಸುಬ್ಬಯ್ಯ ಪ್ರಾಸ್ತಾವಿಕವಾಗಿ ಮಾತನಾಡುತ್ತ ‘ಕೂಟ’ ಇದುವರೆಗೆ ಮಾಡಿದ ಸಾಹಿತ್ಯ ಸೇವೆ ಹಾಗೂ ಮುಂದಿನ ಕಾರ್ಯ ಯೋಜನೆಗಳನ್ನು ವಿವರಿಸುತ್ತಾ ಕೊಡವ ಭಾಷೆಯನ್ನು ಉಳಿಸಿ ಬೆಳೆಸಲು ಕೇವಲ ಸಂಘ ಸಂಸ್ಥೆಗಳಿಂದ ಸಾಧ್ಯವಾಗದು, ಪ್ರತಿಯೊಬ್ಬರು ಕೊಡವ ಭಾಷೆಯಲ್ಲಿ ಮಾತನಾಡುವದು, ಸಾಹಿತ್ಯ ಸೃಷ್ಟಿಸುವದರಿಂದ ಸಾಧ್ಯ ಎಂದರು.
ಕೊಡವ ಭಾಷೆಯಲ್ಲಿ ಹಾಡುಗಾರಿಕೆ, ಓದುವದು ಹಾಗೂ ಶಬ್ದ ಹೇಳುವ ಸ್ಪರ್ಧೆಯನ್ನು ಪ್ರಾಥಮಿಕ, ಪ್ರೌಢ ಶಾಲೆ, ಕಾಲೇಜು ಹಾಗೂ ಸಾರ್ವಜನಿಕ ವಿಭಾಗದಲ್ಲಿ ನಡೆಸಿ ಬಹುಮಾನ ವಿತರಿಸಲಾಯಿತು.
ನಾಳಿಯಮ್ಮಂಡ ವೀಣಾ ಮನುಕುಮಾರ್ ಪ್ರಾರ್ಥಿಸಿ, ಕೈಕೇರಿಯ ಭಗವತಿ ರಿಕ್ರಿಯೇಶನ್ ಅಸೋಸಿಯೇಶನ್‍ನ ನಿರ್ದೇಶಕ ಜಮ್ಮಡ ಮೋಹನ್ ಮಾದಪ್ಪ ಸ್ವಾಗತಿಸಿ, ನಿರ್ದೇಶಕ ಕಾಳಿಮಾಡ ಮೋಟಯ್ಯ ನಿರೂಪಿಸಿ, ಕಾರ್ಯದರ್ಶಿ ಅಮ್ಮಣಿಚಂಡ ಪ್ರವೀಣ್‍ಚಂಗಪ್ಪ ವಂದಿಸಿದರು.