ಮಡಿಕೇರಿ, ಜ. 29: ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಅವರ ಜನ್ಮದಿನಾಚರಣೆಯನ್ನು ಅವರ ಸಮಾಧಿ ಇರುವ ರೋಷನಾರದಲ್ಲಿ ಆಚರಿಸಲಾಯಿತು.
ಕಾರ್ಯಪ್ಪ ಅವರ ಸಮಾಧಿಗೆ ಪುತ್ರ ನಿವೃತ್ತ ಏರ್ ಮಾರ್ಷಲ್ ಕೆ.ಸಿ. ಕಾರ್ಯಪ್ಪ, ಪುತ್ರಿ ನಳಿನಿ ಕಾರ್ಯಪ್ಪ, ಸೊಸೆ ಮೀನಾ ಕಾರ್ಯಪ್ಪ, ನಿವೃತ್ತ ಸೇನಾಧಿಕಾರಿಗಳು ಮತ್ತಿತರ ಪ್ರಮುಖ ರುಗಳು ಪುಷ್ಪಾರ್ಚನೆ ಮಾಡಿದರು.ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯ ಮಕ್ಕಳಿಂದ ಭಜನೆ ನಡೆಯಿತು. ವಿದ್ಯಾರ್ಥಿನಿ ಪ್ರತೀಕ್ಷ, ಕಾರ್ಯಪ್ಪ ಅವರ ಕುರಿತು ಭಾಷಣ ಮಾಡಿದಳು. ಫೀ.ಮಾ. ಕಾರ್ಯಪ್ಪ ಅವರ ಜನ್ಮದಿನ ಪ್ರಯುಕ್ತ ‘ಭಾರತವನ್ನು ಸುಭದ್ರ ರಾಷ್ಟ್ರವೆಂದು ಫೀ.ಮಾ. ಕಾರ್ಯಪ್ಪ ನಂಬಿದ್ದರು’ ವಿಷಯದ ಕುರಿತು ಏರ್ಪಡಿಸಿದ್ದ ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದ ಕೂಡಿಗೆ ಸೈನಿಕ ಶಾಲೆಯ ವಿದ್ಯಾರ್ಥಿ ಸುಜಿತ್ ಎಂ. ಬಿರಾದರ್ ತಮ್ಮ ಪ್ರಬಂಧವನ್ನು ಮಂಡಿಸಿದರು.