ಗೋಣಿಕೊಪ್ಪ ವರದಿ, ಜ. 28 : ಪೊನ್ನಂಪೇಟೆ ಪಟ್ಟಣದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತರುಗಳು ಪಥಸಂಚಲನ ನಡೆಸುವ ಮೂಲಕ ದೇಶಭಕ್ತಿ ಮೂಡಿಸಿದರು.

ಅಲ್ಲಿನ ಕೈಗಾರಿಕಾ ತರಬೇತಿ ಸಂಸ್ಥೆ ಸಮೀಪದ ಮೈದಾನದಲ್ಲಿ ಸೇರಿದ್ದ ನೂರಾರು ಸ್ವಯಂಸೇವಕರು ಪಥಸಂಚನದಲ್ಲಿ ಭಾಗಿಯಾದರು.

ಪಥ ಸಂಚಲನದಲ್ಲಿ ಪಾಲ್ಗೊಂಡ ಗಣವೇಷÀಧಾರಿಗಳಿಗೆ ಬಸವೇಶ್ವರ ದೇವಸ್ಥಾನ ಹಾಗೂ ರಾಮಕೃಷ್ಣಾಶ್ರಮದ ಸಮೀಪ ಪುಷ್ಪಾರ್ಚನೆ ಮಾಡುವ ಮೂಲಕ ಅಭಿಮಾನಿಗಳು ಗೌರವ ನೀಡಿದರು. ಆಶ್ರಮದ ಆವರಣದಿಂದ ಮೆರವಣಿಗೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಮುಕ್ತಾಯವಾಯಿತು.