ಸಿದ್ದಾಪುರ, ಜ. 28: ಜಿಲ್ಲೆಯಲ್ಲಿ ಅತ್ಯಧಿಕ ಗ್ರಾ.ಪಂ. ಸದಸ್ಯರನ್ನು ಹೊಂದಿರುವ ಸಿದ್ದಾಪುರ ಗ್ರಾ.ಪಂ. ವ್ಯಾಪ್ತಿಯಲ್ಲಿ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಇದೀಗ ಪಡಿತರ ಚೀಟಿಯ ಸಮಸ್ಯೆಯಿಂದಾಗಿ ಕಾರ್ಮಿಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಹೊಸ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿದ್ದು, ಕಳೆದ ಹಲವು ದಿನಗಳಿಂದ ಬಯೋಮೆಟ್ರಿಕ್‍ನಲ್ಲಿ ಭಾವಚಿತ್ರ ತೆಗೆಯಲು ಕಾರ್ಮಿಕರು ದಿನಂಪ್ರತಿ ಗ್ರಾ.ಪಂ.ಗೆ ಆಗಮಿಸುತ್ತಿದ್ದು, ಬಯೋಮೆಟ್ರಿಕ್ ದುರಸ್ತಿಯಾಗಿದೆ ಎಂದು ಸಿಬ್ಬಂದಿಗಳು ಹಾರಿಕೆಯ ಉತ್ತರ ನೀಡಿ ಸತಾಯಿಸುತ್ತಿದ್ದಾರೆ ಎಂದು ಕಾರ್ಮಿಕರು ಅಳಲು ತೋಡಿಕೊಂಡಿದ್ದಾರೆ. ಇದಲ್ಲದೆ ತಮ್ಮ ಕೆಲಸ ಕಾರ್ಯಗಳನ್ನು ಬಿಟ್ಟು ಪಡಿತರ ಚೀಟಿಗಾಗಿ ಗ್ರಾ.ಪಂ.ಗೆ ಅಲೆದಾಡಿದರೂ ಪ್ರಯೋಜನವಾಗದೆ, ಬಡವರು ಪಡಿತರ ಚೀಟಿಯಿಂದ ವಂಚಿತರಾಗುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬಯೋಮೆಟ್ರಿಕ್ ದುರಸ್ತಿಗೆ ಗ್ರಾ.ಪಂ.ನಲ್ಲಿ ಹಣ ಇಲ್ಲ ಎಂಬದಾಗಿ ಗ್ರಾ.ಪಂ. ಅಸಹಾಯಕತೆ ವ್ಯಕ್ತಪಡಿಸುತ್ತದೆ.
ಈ ಬಗ್ಗೆ ಜಿಲ್ಲಾಧಿಕಾರಿಗಳು ಹಾಗೂ ಸಂಬಂಧಪಟ್ಟ ಇಲಾಖಾ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಂಡು ಸಮಸ್ಯೆಯನ್ನು ಬಗೆಹರಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.