ಶನಿವಾರಸಂತೆ, ಜ. 27: ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಫೆ. 11 ರಂದು ಜಿಲಾಮಟ್ಟದ ಪತ್ರಕರ್ತರ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ ಇಲ್ಲಿನ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಕ್ರೀಡಾಂಗಣದಲ್ಲಿ ನಡೆಯಲಿದೆ.

ಅಂದು ಬೆಳಿಗ್ಗೆ ಕೊಡಗು ಜಿಲ್ಲಾ ಪತ್ರಕರ್ತರ ಕ್ರಿಕೆಟ್ ತಂಡ ಹಾಗೂ ಶನಿವಾರಸಂತೆ ಹೋಬಳಿ ಸರಕಾರಿ ನೌಕರರ ತಂಡಗಳ ನಡುವೆ ಪ್ರದರ್ಶನ ಪಂದ್ಯ ನಡೆಯಲಿದೆ. ವಿಜೇತ ಪತ್ರಕರ್ತರ ತಂಡಗಳಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನವಾಗಿ ಆಕರ್ಷಕ ಟ್ರೋಫಿ ಮತ್ತು ನಗದು ಬಹುಮಾನವನ್ನು ನೀಡಲಾಗುವದು. ಮಾಹಿತಿಗಾಗಿ 7090471288, 9972847003, 9483834652, 9742556321 ಸಂಪರ್ಕಿಸಲು ಕೋರಿದೆ.