ಚೆಟ್ಟಳ್ಳಿ: ಚೆಟ್ಟಳ್ಳಿಯ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ವೀರಾಜಪೇಟೆ ಪದವಿ ಕಾಲೇಜಿನ ವತಿಯಿಂದ ಆಯೋಜಿಸಲಾಗಿದ್ದ ಎನ್‍ಎಸ್‍ಎಸ್ ಶಿಬಿರದಲ್ಲಿ ಕಾಫಿ ಬೆಳೆಗಾರ ಸೋಮೆಯಂಡ ದಿಲೀಪ್ ಅಪ್ಪಚು ಅವರ ಅಧ್ಯಕ್ಷತೆಯಲ್ಲಿ ಶೈಕ್ಷಣಿಕ ಕಾರ್ಯಕ್ರಮ ನಡೆಯಿತು.
ಕಾಲೇಜಿನ ವಾಣಿಜ್ಯ ವಿಭಾಗದ ಉಪಾನ್ಯಾಸಕ ಸೋಮಣ್ಣ ಧ್ವಜಾರೋಹಣ ಮಾಡಿದರು. ಸಂಪನ್ಮೂಲ ವ್ಯಕ್ತಿಯಾಗಿ ಗೋಣಿಕೊಪ್ಪಲು ಕಾವೇರಿ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಮಂದೇಯಂಡ ವನೀತ್ ಕುಮಾರ್ ಭಾಗವಹಿಸಿ ರಾಷ್ಟ್ರ ನಿರ್ಮಾಣದಲ್ಲಿ ಯುವ ಜನತೆಯ ಪಾತ್ರ ವಿಷಯವಾಗಿ ಭಾಷಣ ಮಾಡಿದರು. ಉಪನ್ಯಾಸಕ ಎಸ್.ಆರ್. ತಿರುಮಲಯ್ಯ ರಾಷ್ಟ್ರೀಯ ಯೋಜನೆ ಮತ್ತು ಸಾಂಸ್ಕøತಿಕ ಚಟುವಟಿಕೆಯ ಬಗ್ಗೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಚೆಟ್ಟಳ್ಳಿ ಸಹಕಾರ ಸಂಘದ ನಿರ್ದೇಶಕ ಪುತ್ತರಿರ ಸೀತಮ್ಮ, ನೂಜಿಬೈಲು ಡಿ. ನಾಣಯ್ಯ, ಸಹಕಾರ ಸಂಘದ ಲೆಕ್ಕಪರಿಶೋಧಕ ಹಾಗೂ ಸಲಹೆಗಾರ ಹೆಚ್.ಬಿ. ರಮೇಶ್, ಚೆಟ್ಟಳ್ಳಿ ಚೆಸ್ಕಾಂನ ಕಿರಿಯ ಅಭಿಯಂತರ ದಿನೇಶ್, ಚೆಟ್ಟಳ್ಳಿ ಸ.ಮಾ.ಪ್ರಾ. ಶಾಲೆಯ ಸದಸ್ಯೆ ಪ್ರಮೀಳ, ಸಹ ಶಿಕ್ಷಕರಾದ ಜಾಲಿ ಜೋಸ್ವೀನ್, ಎಂ.ಆರ್. ವಿಶಾಲಾಕ್ಷಿ, ಕಾಫಿ ಬೆಳೆಗಾರ ಪುತ್ತರಿರ ಕಾಶಿ ಸುಬ್ಬಯ್ಯ ಹಾಜರಿದ್ದರು.