ಆಲೂರುಸಿದ್ಧಾಪುರ, ಜ. 26: ಸ್ಥಳೀಯ ಸರಕಾರಿ ಪ.ಪೂ.ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ ತಾ. 29 ರ ಬೆಳಗ್ಗೆ 10.30 ರಿಂದ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿ ಗಾಗಿ ಪರೀಕ್ಷೆಯಲ್ಲಿ ಜಯಗಳಿಸುವದು ಹೇಗೆ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಈ ಬಗ್ಗೆ ಮಂಗಳೂರು ವಿಶ್ವ ವಿದ್ಯಾನಿಲಯದ ಚಿಕ್ಕ ಅಳುವಾರದಲ್ಲಿರುವ ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಪಿ.ಎಲ್. ಧರ್ಮ ಉಪನ್ಯಾಸ ನೀಡಲಿದ್ದು, ಅಧ್ಯಕ್ಷತೆಯನ್ನು ಕಾಲೇಜಿನ ಪ್ರಭಾರ ಪ್ರಾಂಶುಪಾಲ ಜಿ.ಟಿ. ಗಣಪತಿ ಭಟ್ ವಹಿಸಲಿದ್ದು, ಸ್ನಾತಕೋತ್ತರ ಕೇಂದ್ರದ ಕನ್ನಡ ಅಧÀ್ಯಯನ ಸಂಸ್ಥೆಯ ಉಪನ್ಯಾಸಕ ಜಮೀರ್ ಅಹಮದ್, ಪತ್ರಕರ್ತ ದಿನೇಶ್ ಮಾಲಂಬಿ, ಚೆರಿಯಮನೆ ಸುರೇಶ್ ಮುಂತಾದವರು ಭಾಗವಹಿಸುತ್ತಾರೆ ಎಂದು ಪ್ರಕಟಣೆ ತಿಳಿಸಿದೆ.