ಸಿದ್ದಾಪುರ, ಜ. 26: ಪ್ರೆಸ್ ಕ್ಲಬ್ ಡೇ ಅಂಗವಾಗಿ ಪತ್ರಕರ್ತರು ಮತ್ತು ಕುಟುಂಬ ಸದಸ್ಯರಿಗೆ ಕ್ರೀಡಾಕೂಟ ಆಯೋಜಿಸಿರುವದಾಗಿ ಕ್ಲಬ್ ಕ್ರೀಡಾ ಸಂಚಾಲಕ ಎಂ.ಎ ಅಜೀಜ್ ತಿಳಿಸಿದ್ದಾರೆ. ಫೆ.10ರಂದು ಪ್ರೆಸ್ ಕ್ಲಬ್‍ಡೇ ಆಚರಿಸಲಿದ್ದು ಫೆ.4ರಂದು ಕ್ಲಬ್ ಸಭಾಂಗಣದಲ್ಲಿ ಒಳಾಂಗಣ ಕ್ರೀಡಾಕೂಟ ಆಯೋಜಿಸಿರುವದಾಗಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಕೇರಂ ಸಿಂಗಲ್ಸ್ ಮತ್ತು ಡಬಲ್ಸ್, ಟೇಬಲ್ ಟೆನ್ನಿಸ್ ಡಬಲ್ಸ್ ಮತ್ತು ಸಿಂಗಲ್ಸ್, ಚೆಸ್ ಮತ್ತು ರೆಮ್ಮಿ ಸ್ಪರ್ಧೆ ನಡೆಯಲಿದ್ದು, ಆಸಕ್ತರು ಫೆ. 2ರ ಒಳಗಾಗಿ (9845537701) ಹೆಸರು ನೊಂದಾ ಯಿಸಲು ಕೋರಲಾಗಿದೆ. ಫೆ.10 ರಂದು ಮನರಂಜನಾ ಕ್ರೀಡೆಗಳನ್ನು ಕೂಡಾ ಹಮ್ಮಿಕೊಂಡಿರುವದಾಗಿ ತಿಳಿಸಿದರು. ಗೋಷ್ಠಿಯಲ್ಲಿ ಕೊಡಗು ಪ್ರೆಸ್ ಕ್ಲಬ್ ಉಪಾಧ್ಯಕ್ಷ, ಕ್ರೀಡಾ ಸಂಚಾಲಕ ಆರ್. ಸುಬ್ರಮಣ್ಯ, ಖಜಾಂಚಿ ರೆಜಿತ್ ಕುಮಾರ್ ಇದ್ದರು.