ಗೋಣಿಕೊಪ್ಪ ವರದಿ, ಜ. 26: ಎಲ್ಲಾ ವರ್ಗದ ಜನರು ಮೊದಲು ಭಾರತೀಯತೆಯನ್ನು ಬೆಳೆÀಸಿಕೊಂಡು ಪ್ರಜಾಪ್ರಭುತ್ವವನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡಬೇಕು ಎಂದು ಜಿಲ್ಲಾ ಎಸ್‍ಕೆಎಸ್‍ಎಸ್‍ಎಫ್ ರಾಜ್ಯಾಧ್ಯಕ್ಷ ಬಹು ಅನಿಸ್ ಕೌಸರ್ ಹೇಳಿದರು.

ಗಣರಾಜ್ಯೋತ್ಸವದ ಪ್ರಯುಕ್ತ ಸೌಹಾರ್ದತೆಯ ಸಂಕಲ್ಪ ಧ್ಯೇಯದೊಂದಿಗೆ ಪೊನ್ನಂಪೇಟೆಯಲ್ಲಿ ಆಯೋಜಿಸಲಾಗಿದ್ದ ಮಾನವ ಸರಪಳಿ, ಸೌಹಾರ್ದ ಸಂದೇಶ ಜಾಥಾದ ಸಮ್ಮೇಳನದಲ್ಲಿ ಮುಖ್ಯ ಭಾಷಣಕಾರರಾಗಿ ಆಗಮಿಸಿ ಮಾತನಾಡಿದರು. ಮಾನವೀಯತೆ ದೇಶದ ಅತೀ ದೊಡ್ಡ ಧರ್ಮ, ಎಲ್ಲರೂ ಇದನ್ನು ಅರಿತುಕೊಳ್ಳಬೇಕು ಎಂದು ಹೇಳಿದರು.

ಮಸೀದಿ, ದೇವಸ್ಥಾನ, ಚರ್ಚ್ ಇವೆಲ್ಲವೂ ದೇವರಿಗೆ ಹತ್ತಿರವಾಗಲೂ ಇರುವದಾಗಿದೆ ಎಂದು ಮುಖ್ಯ ಅತಿಥಿಗಳಾಗಿ ಆಗಮಿಸಿದ ಶ್ರೀ ರಾಮಕೃಷ್ಣ ಶಾರದಾಶ್ರಮದ ಇಶಾ ಪ್ರೇಮನಂದಾ ಸ್ವಾಮೀಜಿ ಹೇಳಿದರು.

ಮಸೀದಿಯಿಂದ ಮುಖ್ಯ ರಸ್ತೆಗಳಲ್ಲಿ ಮೆರವಣಿಗೆ ಮೂಲಕ ಬಸ್ ನಿಲ್ದಾಣದವರೆಗೆ ಸೌಹಾರ್ದ ಸಂದೇಶ ಜಾಥಾ ನಡೆಯಿತು. ಜಾತಿ, ಧರ್ಮವನ್ನು ಬಿಟ್ಟು ಸೌಹಾರ್ಧತೆ ಯಿಂದ ದೇಶವನ್ನು ರಕ್ಷಿಸೋಣ ಎಂದು ಪ್ರತಿಜ್ಞಾವಿಧಿ ಸ್ವೀಕರಿಸಿದರು. ಎಸ್‍ಕೆಎಸ್‍ಎಸ್‍ಎಫ್‍ನ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.

ಈ ಸಂದರ್ಭ ಎಸ್‍ಕೆಎಸ್ ಎಸ್‍ಎಫ್‍ನ ಜಿಲ್ಲಾ ಅಧ್ಯಕ್ಷ ವೈ.ಯು ಸೌಶಾದ್ ಪೈಝಿ, ಸಂತ ಅನ್ನಮ್ಮ ಶಾಲೆಯ ರೆವರೆಂಡ್ ಫಾದರ್ ಐಸಾಕ್, ಜಿಲ್ಲಾ ಕೆ.ಪಿ.ಸಿ.ಸಿ.ಯ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಎಂ ಇಬ್ರಾಹಿಂ ಮಾಸ್ಟರ್, ಜೆ.ಎಂ.ಸಿ.ಸಿ ಕೇಂದ್ರ ಕಾರ್ಯದರ್ಶಿ ಅಬ್ದುಲ್ ಇಸ್ಮಾಯಿಲ್ ಮುಸ್ಲಿಯಾರ್, ಪೊನ್ನಂಪೇಟೆ ಕಾಂಗ್ರೆಸ್ ಅಧ್ಯಕ್ಷ ಮತ್ರಂಡ ದಿಲ್ಲು, ಬಿ.ಜೆ.ಪಿ ಸ್ಥಾನೀಯ ಅಧ್ಯಕ್ಷ ಮಂಜು ಗಣಪತಿ, ಗ್ರಾ.ಪಂ. ಮಾಜಿ ಉಪಾಧ್ಯಕ್ಷ ಪಿ. ಎಂ ಅಜೀಜ್, ಜಿಲ್ಲಾ ಅಲ್ಪಸಂಖ್ಯಾಂತರ ಘಟಕದ ಅಧ್ಯಕ್ಷ ಕೆ.ಎ. ಯಾಕೂಬ್, ವಕ್ಫ್ ಮಂಡಳಿ ಅಧ್ಯಕ್ಷ ಆಲೀರ ಎರ್ಮು ಹಾಜಿ, ಜೆಡಿಎಸ್ ಮುಖಂಡ ದಯಾ ಚೆಂಗಪ್ಪ ಹಾಜರಿದ್ದರು.