ಸುಂಟಿಕೊಪ್ಪ, ಜ. 26: ಪ್ರಧಾನ ಮಂತ್ರಿ ನರೇಂದ್ರ ಮೋದಿ ಉಜ್ವಲ ಯೋಜನೆಯಡಿಯಲ್ಲಿ ನಾಕೂರು-ಶಿರಂಗಾಲ ಗ್ರಾಮ ಪಂಚಾಯಿತಿಯ ಬಿಪಿಎಲ್ 21 ಬಡ ಕುಟುಂಬಗಳಿಗೆ ಪಡಿತರ ಪಲಾನುಭವಿಗಳಿಗೆ ಅಡುಗೆ ಅನಿಲವನ್ನು ವಿತರಿಸಲಾಯಿತು.

ಸುಂಟಿಕೊಪ್ಪ ಇಂಡೇನ್ ಗ್ಯಾಸ್ ವತಿಯಿಂದ ನೀಡಲಾದ ಉಚಿತ ಗ್ಯಾಸ್ ಸಿಲಿಂಡರ್ ಮತ್ತು ಸ್ಟೌವ್‍ಗಳನ್ನು ತಾಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ಶಂಕರ ನಾರಾಯಣ, ಗ್ರಾಮ ಪಂಚಾಯಿತಿ ಸದಸ್ಯ ಅಂಬೆಕಲ್ ಚಂದ್ರ ಶೇಖರ, ಕಾನ್‍ಬೈಲು ಹಿರಿಯ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ವಿತರಿಸಿದರು.

ಈ ಸಂದರ್ಭ ಸುಂಟಿಕೊಪ್ಪ ಇಂಡೇನ್ ಗ್ಯಾಸ್‍ನ ವ್ಯವಸ್ಥಾಪಕ ರಾಖೇಶ್, ಸಿಬಂದಿಗಳಾದ ಕಿರನ್, ಶಶೀಂದ್ರ, ಗ್ರಾಮ ಪಂಚಾಯಿತಿಯ ಮಾಜಿ ಸದಸ್ಯ ಚೋಮಣಿ (ರಘು) ಸಾರ್ವಜನಿಕರು ಹಾಜರಿದ್ದರು.