ಗೋಣಿಕೊಪ್ಪಲು, ಜ. 26: ಇಲ್ಲಿನ ಕಾವೇರಿ ವಿದ್ಯಾಸಂಸ್ಥೆ ಹಾಗೂ ಕಾವೇರಿ ಕಾಲೇಜಿನ ಸುವರ್ಣ ಮಹೋತ್ಸವ ವರ್ಷಾಚರಣೆಯ ಪ್ರಯುಕ್ತ ಮಹಿಳಾ ಸಿಬಂದಿಗಳಿಗಾಗಿ ವೀರಾಜಪೇಟೆ ಕಾವೇರಿ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಅಂತರ ಕಾಲೇಜು ಥ್ರೋಬಾಲ್ ಪಂದ್ಯಾವಳಿಯ ಅಂತಿಮ ಪಂದ್ಯದಲ್ಲಿ ಗೋಣಿಕೊಪ್ಪಲು ಕಾವೇರಿ ಪದವಿ ಕಾಲೇಜು ತಂಡ ವೀರಾಜಪೇಟೆ ಕಾವೇರಿ ಕಾಲೇಜು ತಂಡದ ವಿರುದ್ಧ ಜಯಗಳಿಸಿ ಪ್ರಶಸ್ತಿ ಮುಡಿಗೇರಿಸಿ ಕೊಂಡಿತು. ವಿಜಯಿ ತಂಡದ ತರಬೇತುದಾರರಾಗಿ ಎಂ.ಟಿ. ಸಂತೋಷ್ ಹಾಗೂ ಎ.ಎಂ. ಪೊನ್ನಪ್ಪ ಕಾರ್ಯ ನಿರ್ವಹಿಸಿದ್ದರು.