ಸಿದ್ದಾಪುರ, ಜ. 24: ಕಾಫಿ ತೋಟದಲ್ಲಿದ್ದ ಮರಗಳನ್ನು ಕದ್ದೊಯ್ಯುತ್ತಿದ್ದ ಮೂವರು ಆರೋಪಿಗಳನ್ನು ಸಿದ್ದಾಪುರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸಮೀಪದ ಬಾಡಗ ಬಾಣಂಗಾಲ ಗ್ರಾಮದ ಜೋಸೆಫ್ ಚೆರಿಯಾನ್ ಹಾಗೂ ಘಟ್ಟದಳ ಸಮೀಪದ ಎ.ಬಿ ಬಿದ್ದ ಎಂಬವರಿಗೆ ಸೇರಿದ ಹೆರೂರು ತೋಟದಿಂದ ಬೀಟೆ ಹಾಗೂ ತೇಗ ಮರವನ್ನು ಕದ್ದೊಯ್ಯು ತ್ತಿದ್ದ ಆನಂದಪುರ ನಿವಾಸಿ ದೀಪಕ್ ವಾಟಾರ್, ಚೆನ್ನಯ್ಯನಕೋಟೆ ನಿವಾಸಿಗ ಳಾದ ಮಂಜು ಹಾಗೂ ಕುಮಾರ್ ಎಂಬ ಆರೋಪಿಗಳನ್ನು ಸಿದ್ದಾಪುರ ಪೊಲೀಸರು ಬಂಧಿಸಿದ್ದಾರೆ. ಉಳಿದ ಆರೋಪಿಗಳು ಪರಾರಿಯಾಗಿದ್ದು, ಆರೋಪಿಗಳಿಗಾಗಿ ಶೋಧ ಮುಂದುವರೆದಿದೆ. ಸಿದ್ದಾಪುರ ಠಾಣಾಧಿಕಾರಿ ಸುಬ್ರಮಣ್ಯ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದೆ.