ಗೋಣಿಕೊಪ್ಪ ವರದಿ, ಜ. 24: ಇಲ್ಲಿನ ಕಾವೇರಿ ಕಾಲೇಜು ಸುವರ್ಣ ಮಹೋತ್ಸವ ವರ್ಷಾಚರಣೆಯ ಪ್ರಯುಕ್ತ ಕಾಲೇಜಿನ ಮಹಿಳಾ ಸಿಬ್ಬಂದಿಗಳಿಗೆ ಥ್ರೋಬಾಲ್ ಕ್ರೀಡೆ ನಡೆಸಲಾಯಿತು. ಕಾವೇರಿ ವಿದ್ಯಾ ಸಂಸ್ಥೆಯ ವೀರಾಜಪೇಟೆ ಹಾಗೂ ಗೋಣಿಕೊಪ್ಪ ಕಾಲೇಜು ತಂಡಗಳ ನಡುವೆ ಸ್ಪರ್ಧೆ ನಡೆಸಲಾಯಿತು.
ಗೋಣಿಕೊಪ್ಪ ಕಾವೇರಿ ಪದವಿ ಕಾಲೇಜು ಕಪ್ ಗೆದ್ದುಕೊಂಡಿತು. ವೀರಾಜಪೇಟೆ ಕಾವೇರಿ ಕಾಲೇಜು ದ್ವಿತೀಯ ಸ್ಥಾನ ಪಡೆಯಿತು.