ಸೋಮವಾರಪೇಟೆ, ಜ. 25: ಪಟ್ಟಣ ಪಂಚಾಯಿತಿಯ ವಾಣಿಜ್ಯ ಸಂಕೀರ್ಣಗಳಲ್ಲಿ ಮಳಿಗೆ ಬಾಡಿಗೆ ಪಡೆದು ಕಳೆದ ಅನೇಕ ತಿಂಗಳುಗಳಿಂದ ಬಾಡಿಗೆ ಹಣ ಪಾವತಿಸದ ಅಂಗಡಿ ಮಾಲೀಕರ ವಿರುದ್ಧ ಪ.ಪಂ. ಕ್ರಮಕ್ಕೆ ಮುಂದಾಗಿದೆ.

ಪಟ್ಟಣ ಪಂಚಾಯಿತಿಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಬಾಡಿಗೆ ಪಾವತಿಸದ ಕೆಲವು ಅಂಗಡಿಗಳಿಗೆ ಬೀಗ ಜಡಿದ ಹಿನ್ನೆಲೆ ಉಳಿದವರು ಸ್ಥಳದಲ್ಲೇ ಬಾಡಿಗೆ ಹಣ ಪಾವತಿಸಿದರು.

ಕಳೆದ ಅನೇಕ ತಿಂಗಳುಗಳಿಂದ ಬಾಡಿಗೆ ಹಣ ಪಾವತಿಸದ ಬಗ್ಗೆ ನೋಟೀಸ್ ನೀಡಿದ್ದರೂ ಸಹ ಮಾಲೀಕರುಗಳು ಹಣ ಪಾವತಿಸುತ್ತಿರಲಿಲ್ಲ. ಈ ಹಿನ್ನೆಲೆ ಅನಿವಾರ್ಯವಾಗಿ ಅಂತಹ ಅಂಗಡಿ ಗಳಿಗೆ ಬೀಗ ಜಡಿಯಲಾಗುತ್ತಿದೆ. ಪಂಚಾಯಿತಿಯ ಆದಾಯವನ್ನು ಗಮನದಲ್ಲಿಟ್ಟುಕೊಂಡು ಬಾಡಿಗೆ ವಸೂಲಾತಿಗೆ ಕ್ರಮ ಕೈಗೊಳ್ಳ ಲಾಗುತ್ತಿದೆ ಎಂದು ಪ.ಪಂ. ಮುಖ್ಯಾಧಿಕಾರಿ ನಾಚಪ್ಪ ತಿಳಿಸಿದರು.