ಸೋಮವಾರಪೇಟೆ, ಜ. 25: ಜಿಲ್ಲಾ ಆಸ್ಪತ್ರೆ ಮಡಿಕೇರಿ, ಕೊಡಗು ಜಿಲ್ಲಾ ಏಡ್ಸ್ ನಿರೋಧಕ ಮತ್ತು ನಿಯಂತ್ರಣ ಘಟಕ, ಯಡೂರು ಬಿಟಿಸಿಜಿ ಕಾಲೇಜಿನ ರೆಡ್ ಕ್ರಾಸ್ ಮತ್ತು ರೆಡ್‍ರಿಬ್ಬನ್ ಘಟಕಗಳ ಸಂಯುಕ್ತ ಆಶ್ರಯದಲ್ಲಿ ಕಾಲೇಜು ಸಭಾಂಗಣದಲ್ಲಿ ಏಡ್ಸ್ ಕುರಿತ ಜಾಗೃತಿ ಕಾರ್ಯಾಗಾರ ನಡೆಯಿತು.
ಇಲ್ಲಿನ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಆಪ್ತ ಸಮಾಲೋಚಕ ಶಂಕರಮಠಪತಿಯವರು ಏಡ್ಸ್ ಕಾಯಿಲೆ ಹರಡುವದು, ಕಾಯಿಲೆ ಬಂದವರ ಆರೈಕೆ, ತಾಯಿಯಿಂದ ಮಗುವಿಗೆ ಕಾಯಿಲೆ ಹರಡುವದನ್ನು ತಡೆಯುವ ಮುಂಜಾಗ್ರತಾ ಕ್ರಮವನ್ನು ತಿಳಿಸಿದರು. ಕೊನೆಯಲ್ಲಿ ವಿದ್ಯಾರ್ಥಿಗಳೊಂದಿಗೆ ವಿಚಾರಗೋಷ್ಠಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಕೆ.ಇ. ಐಪು ವಹಿಸಿದ್ದರು. ವೇದಿಕೆಯಲ್ಲಿ ಕಾಲೇಜಿನ ರೆಡ್‍ಕ್ರಾಸ್ ಮತ್ತು ರೆಡ್‍ರಿಬ್ಬನ್ ಘಟಕದ ಸಂಚಾಲಕ ಪ್ರೊ. ಎಂ.ಎಸ್. ಶಿವಮೂರ್ತಿ, ಕಾಲೇಜಿನ ಬೋಧಕೇತರ ವರ್ಗ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.