ಮಡಿಕೇರಿ, ಜ. 25 : ಗಣರಾಜ್ಯೋತ್ಸವದ ಅಂಗವಾಗಿ ರಾಷ್ಟ್ರ ರಕ್ಷಣೆಗೆ ಸೌಹಾರ್ದತೆಯ ಸಂಕಲ್ಪ ಎಂಬ ಧ್ಯೇಯ ವಾಕ್ಯದೊಂದಿಗೆ ಕೊಡಗು ಜಿಲ್ಲಾ ಎಸ್‍ಕೆಎಸ್‍ಎಸ್‍ಎಫ್ ವತಿಯಿಂದ ಜ.26 ರಂದು ಮಾನವ ಸರಪಳಿ ಹಾಗೂ ಸೌಹಾರ್ದ ಸಮ್ಮೇಳನ ಮತ್ತು ಸೌಹಾರ್ದ ಸಂದೇಶ ಜಾಥಾ ಪೊನ್ನಂಪೇಟೆಯಲ್ಲಿ ನಡೆಯಲಿದೆ.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಎಸ್‍ಕೆಎಸ್‍ಎಸ್‍ಎಫ್‍ನ ಕಾರ್ಯದರ್ಶಿ ಎಮ್.ತಂಮ್ಲೀಕ್ ದಾರಿಮಿ, ಪೊನ್ನಂಪೇಟೆ ಮಸೀದಿಯಿಂದ ಹಾದು ನಗರದ ಮುಖ್ಯ ಬೀದಿಗಳ ಮೂಲಕ ಬಸ್ ನಿಲ್ಧಾಣದ ವರೆಗೆ ಸೌಹಾರ್ದ ಸಂದೇಶ ಜಾಥಾ ನಡೆಯಲಿದೆ ಎಂದರು. ಸಂಜೆ 4 ಗಂಟೆಗೆ ಬಸ್ ನಿಲ್ದಾಣದಲ್ಲಿ ಸೌಹಾರ್ದ ಸಮ್ಮೇಳನ ನಡೆಯಲಿದ್ದು, ಕೊಡಗು ಜಿಲ್ಲಾ ಉಪ ಖಾಝಿ ಖೈಖುನಾ ಎಂ.ಎಂ. ಪೈಝಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಅಧ್ಯಕ್ಷತೆಯನ್ನು ಎಸ್.ಕೆ.ಎಸ್.ಎಸ್.ಎಫ್ ನ ಜಿಲ್ಲಾ ಅಧ್ಯಕ್ಷರಾದ ವೈ. ಯು. ಸೌಶಾದ್ ಪೈಝಿ ವಹಿಸಲಿದ್ದಾರೆ ಎಂದರು. ಈ ಸಂದರ್ಭ ಎಸ್.ಕೆ.ಎಸ್‍ಎಸ್.ಎಫ್‍ನ ರಾಜ್ಯ ಅಧ್ಯಕ್ಷ ಬಹು ಅನಿಸ್ ಕೌಸರಿ ಮುಖ್ಯ ಭಾಷಣ ಮಾಡಲಿದ್ದು, ಮುಖ್ಯ ಅತಿಥಿಗಳಾಗಿ ವಿ.ಪಿ.ಎಫ್. ಮುತ್ತುಕೋಯ ತಙಳ್ ಹಾಗೂ ಪೊನ್ನಂಪೇಟೆ ಶಾರದಾಶ್ರಮದ ಶ್ರೀ ಶ್ರೀ ಸ್ವಾಮಿ ಇಶಾ ಪ್ರೇಮಾನಂದ ಸ್ವಾಮೀಜಿ ಮತ್ತು ಸಂತ ಅನ್ನಮ್ಮ ಶಾಲೆಯ ರೆವೆರೆಂಡ್ ಫಾಧರ್ ಐಸಕ್ ಹಾಗೂ ಕಾಂಗ್ರೆಸ್‍ನ ಜಿಲ್ಲಾಧ್ಯಕ್ಷರಾದ ಶಿವುಮಾದಪ್ಪ, ಮಾಜಿ ವಿಧಾನ ಪರಿಷತ್ ಸದಸ್ಯ ಅರಣ್ ಮಾಚಯ್ಯ ಸೇರಿದಂತೆ ಕೊಡಗು ಜಿಲ್ಲಾ ಕೆ.ಪಿ.ಸಿ.ಸಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಎಂ. ಇಬ್ರಾಹಿಂ ಮಾಸ್ಟರ್, ಜೆ.ಎಂ.ಸಿ.ಸಿ ಕೇಂದ್ರ ಕಾರ್ಯದರ್ಶಿ ಎಂ. ಅಬ್ದುಲ್ ರಹ್ಮಾನ್ ಮಸ್ಲಿಯಾರ್ ಪಿ.ಬಿ. ಇಸ್ಮಾಯಿಲ್ ಮುಸ್ಲಿಯರ್, ಪೊನ್ನಂಪೇಟೆ ಕಾಂಗ್ರೆಸ್ ಅಧ್ಯಕ್ಷ ಮತ್ತೇರಂಡ ದಿಳ್ಳು, ಬಿಜೆಪಿ ಸ್ಥಾನೀಯ ಅಧ್ಯಕ್ಷ ಎಂ.ಗಣಪತಿ ಮಂಜು, ಮಾಜಿ ಗ್ರಾ.ಪಂ. ಉಪಾಧ್ಯಕ್ಷ ಪಿ.ಎಂ. ಅಜೀಜ್, ಕೊಡಗು ಜಿಲ್ಲಾ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಕೆ.ಎ.ಯಾಕೂಬ್ ವಕ್ಫ್ ಮಂಡಳಿ ಅಧ್ಯಕ್ಷ ಆಲಿರ ಯರ್ಮು ಹಾಜಿ ಸೇರಿದಂತೆ ಮತ್ತಿತರರು ಪಾಲ್ಗೊಳ್ಳಲಿದ್ದಾರೆ.

ಈ ಕಾರ್ಯಕ್ರಮವು ಕರ್ನಾಟಕ ವಿವಿಧ ಕೇಂದ್ರಗಳಾದ ಬೆಂಗಳೂರು, ಕೊಡಗು, ಮಂಗಳೂರು ಹಾಗೂ ಚಿಕ್ಕಮಂಗಳೂರಿನಲ್ಲಿ ನಡೆಯಲಿದ್ದು, ಕೇರಳದ 14 ಜಿಲ್ಲೆಗಳಲ್ಲಿ ಮತ್ತು ವಿದೇಶ ರಾಷ್ಟ್ರಗಳಾದ ಸೌದಿ ಅರೇಬಿಯಾ, ಯು.ಎ.ಇ, ಕುವೈತ್, ಬಹ್‍ರೈನ್, ಕತ್ತಾರ್ ಮುಂತಾದ ಕೇಂದ್ರಗಳಲ್ಲಿ ಎಸ್‍ಕೆಎಸ್‍ಎಸ್‍ಎಫ್ ಮಾನವ ಸರಪಳಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಈ ನಿಟ್ಟಿನಲ್ಲಿ ವಿವಿಧ ಧರ್ಮಗುರುಗಳನ್ನು ಒಗ್ಗೂಡಿಸಿ ದೇಶದ ರಕ್ಷಣೆಗಾಗಿ ಈ ಸಂದರ್ಭ ಕಾರ್ಯಕರ್ತರು ಪತ್ರಿಜ್ಞೆ ಯನ್ನು ಸ್ವೀಕರಿಸಲಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಕೊಡಗು ಜಿಲ್ಲಾ ಎಸ್‍ಕೆಎಸ್‍ಎಸ್‍ಎಫ್‍ನ ಅಧ್ಯಕ್ಷ ವೈ.ಯು. ನೌಶಲ್ ಫೈಝಿ, ಕೊಡಗು ಜಿಲ್ಲಾ ಎಸ್‍ವೈಎಸ್‍ನ ವೈ.ಎಮ್. ಉಮ್ಮರ್ ಪೈಝಿ, ಪೊನ್ನಂಪೇಟೆ ಶಾಖೆಯ ಎಸ್‍ಕೆಎಸ್‍ಎಸ್‍ಎಫ್ ಅಧ್ಯಕ್ಷ ಅಬ್ದುಲ್ ರಹೀಂ ಹಾಗೂ ಕಾರ್ಯದರ್ಶಿ ಪಿ.ಎ.ಸಾಜಿರ್ ಉಪಸ್ಥಿತರಿದ್ದರು.