ಮಡಿಕೇರಿ, ಜ. 25: ವಿವಾಹಿತ ವ್ಯಕ್ತಿಯೋರ್ವ ಅಪ್ರಾಪ್ತೆಯ ಮೇಲೆ ಅತ್ಯಾಚಾರದೊಂದಿಗೆ ಲೈಂಗಿಕ ದೌರ್ಜನ್ಯ ಎಸಗಿರುವ ಕೃತ್ಯ ಕರಿಕೆಯಲ್ಲಿ ನಡೆದಿದ್ದು, ಆರೋಪಿ ವಿರುದ್ಧ ಕ್ರಮ ಜರುಗಿಸಲಾಗಿದೆ.

ಅಲ್ಲಿನ ನಿವಾಸಿ ಬಿಜು (28) ಎಂಬಾತ ವಿವಾಹಿತನಾಗಿದ್ದು, ಒಂದು ಮಗುವಿನ ತಂದೆ ಎಂದು ತಿಳಿದುಬಂದಿದೆ. ಹದಿನಾರರ ಅಪ್ರಾಪ್ತೆ ಮೇಲೆ ನಿರಂತರ ಲೈಂಗಿಕ ದೌರ್ಜನ್ಯ ಎಸಗಿದ್ದು, ಭಾಗಮಂಡಲ ಪೊಲೀಸ್ ಠಾಣೆಯಲ್ಲಿ ಪ್ರಕರಣದೊಂದಿಗೆ ಬಿಜುನನ್ನು ಬಂಧಿಸಲಾಗಿದೆ. ಆರೋಪಿ ವಿರುದ್ಧ ಪೊಲೀಸ್ ಕಾಯ್ದೆ 376 ಮತ್ತು ಪೋಕ್ಸೋ ಕಾನೂನು ಅಡಿಯಲ್ಲಿ ಮೊಕದ್ದಮೆ ದಾಖಲಿಸುವ ಮೂಲಕ ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.