ಮಡಿಕೇರಿ, ಜ. 23: ಧ್ವನಿ ಸಿನಿ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ತಯಾರಾಗುತ್ತಿರುವ ಕೊಡಗು ಮೂಲದ ದರ್ಶನ್ ಗೌಡ ನಿರ್ಮಾಣದ ಯುವ ಪ್ರತಿಭೆ ಕುಶನ್‍ಗೌಡ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ‘ನಾಕು ಮುಖ’ ಕನ್ನಡ ಚಲನ ಚಿತ್ರದ ಮುಹೂರ್ತ ಸಮಾರಂಭ ನಗರದ ವಿಜಯವಿನಾಯಕ ದೇವಾಲಯದಲ್ಲಿ ನೆರವೇರಿತು. ‘ಶಕ್ತಿ’ ಸಂಪಾದಕರಾದ ಜಿ. ಚಿದ್ವಿಲಾಸ್ ಚಿತ್ರಕ್ಕೆ ಕ್ಲ್ಯಾಪ್ ಮಾಡಿದರು. ನಿರ್ಮಾಪಕ ದರ್ಶನ್ ಗೌಡ ಅವರ ಪುತ್ರಿ ಧ್ವನಿ ಕ್ಯಾಮೆರಾಗೆ ಚಾಲನೆ ನೀಡಿದರು. ಈ ಸಂದರ್ಭ ಬಿಜೆಪಿ ನಗರಾಧ್ಯಕ್ಷ ಮಹೇಶ್ ಜೈನಿ ಸೇರಿದಂತೆ ಚಿತ್ರತಂಡದ ಕಲಾವಿದರು ಮತ್ತಿತರರು ಇದ್ದರು.