ಮಡಿಕೇರಿ, ಜ.23 : ರೊಟರಿ ಜಿಲ್ಲೆ 3181ರ ಜಿಲ್ಲಾ ಸಮ್ಮೇಳನ 'ಸಂಗಮ-2018' ತಾ .26 ರಿಂದ 28ರವರೆಗೆ ಮೂರು ದಿನಗಳ ಕಾಲ ನಗರದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜು ಮೈದಾನದಲ್ಲಿ ನಡೆಯಲಿದ್ದು, ವಿವಿಧೆಡೆಯ ಸುಮಾರು 1500ಕ್ಕೂ ಅಧಿಕ ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆಯಿದೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ರೋಟರಿ ಜಿಲ್ಲೆ 3181ರ ರಾಜ್ಯಪಾಲ ಮಾತಂಡ ಎಂ. ಚಂಗಪ್ಪ ಅವರು, ಕೊಡಗು, ಮಂಗಳೂರು, ಮೈಸೂರು ಹಾಗೂ ಚಾಮರಾಜನಗರ ಕಂದಾಯ ಜಿಲ್ಲೆಗಳನ್ನೊಳಗೊಂಡಿರುವ ರೋಟರಿ ಜಿಲ್ಲೆ 3181ರಲ್ಲಿ ಸುಮಾರು 72 ಕ್ಲಬ್ ಗಳಿದ್ದು, 3326 ಮಂದಿ ಸದಸ್ಯರಿದ್ದಾರೆ. ರೋಟರಿ ಜಿಲ್ಲೆಯ ರಾಜ್ಯಪಾಲರಾದವರ ಕ್ಲಬ್‍ನ ಆತಿಥ್ಯದಲ್ಲಿ ಪ್ರತಿ ವರ್ಷ ಸಮ್ಮೇಳನಗಳನ್ನು ನಡೆಸುವದು ಸಂಪ್ರದಾಯವಾಗಿದ್ದು, ಅದರಂತೆ ಈ ಬಾರಿ ಮಡಿಕೇರಿ ರೋಟರಿ ಸಂಸ್ಥೆ ಜಿಲ್ಲಾ ಸಮ್ಮೇಳನದ ಆತಿಥ್ಯವನ್ನು ವಹಿಸಿಕೊಂಡಿದೆ ಎಂದು ಹೇಳಿದರು.

ರೋಟರಿ ಜಿಲ್ಲೆಯ ವ್ಯಾಪ್ತಿಯಲ್ಲಿರುವ ವಿವಿಧ ಕ್ಲಬ್‍ಗಳು ಹತ್ತು ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸುತ್ತಿದ್ದು, ಇವುಗಳ ಬಗ್ಗೆ ಪರಸ್ಪರ ವಿಚಾರ ವಿನಿಮಯ ಮಾಡಿಕೊಳ್ಳುವದು ಸಮಾವೇಶದ ಉದ್ದೇಶವಾಗಿದೆ. ಅದರಂತೆ

(ಮೊದಲ ಪುಟದಿಂದ) ಪ್ರತಿಯೊಂದು ಕ್ಲಬ್ ಸದಸ್ಯರು ಪ್ರತಿನಿಧಿ ಶುಲ್ಕ ನೀಡಿ ಈ ಸಮಾವೇಶದಲ್ಲಿ ಭಾಗವಹಿಸುತ್ತಾರೆ ಎಂದು ತಿಳಿಸಿದರು. ದೇಶೀಯ ಗಣ್ಯರೊಂದಿಗೆ ವಿದೇಶದ ರೋಟರಿ ಪ್ರಮುಖರೂ ಮಡಿಕೇರಿಯ ಸಂಗಮ ಸಮ್ಮೇಳನದಲ್ಲಿ ಪಾಲ್ಗೊಳ್ಳುವ ಮೂಲಕ ದೇಶಿಯ ಮತ್ತು ವಿದೇಶಗಳ ರೋಟರಿ ಸಂಗಮದ ಮಹತ್ತರ ಸಮ್ಮೇಳನ ಇದಾಗಲಿದೆ ಎಂದು ಸುರೇಶ್ ಚಂಗಪ್ಪ ಆಶಾಭಾವನೆ ವ್ಯಕ್ತಪಡಿಸಿದರು.

ತಾ.26ರಂದು ಸಂಜೆ ವಿವಿಧೆಡೆಯ ಪ್ರತಿನಿಧಿಗಳು ಆಗಮಿಸಲಿದ್ದು, ಅಂದು ಸಂಜೆ ಜಿಲ್ಲಾ ಸಾಂಸ್ಕøತಿಕ ಸ್ಪರ್ಧೆಗಳಿಗೆ ಕೊಡಗಿನ ಹಿರಿಯ ಕಲಾವಿದೆ ಐಮುಡಿಯಂಡ ರಾಣಿ ಮಾಚಯ್ಯ ಚಾಲನೆ ನೀಡಲಿ ದ್ದಾರೆ. ಮಡಿಕೇರಿಯ ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯದ ಮಕ್ಕಳಿಂದ ದೇಶಭಕ್ತಿ ಸಾರುವ ನೃತ್ಯ, ಪರಿಸರ ಸಂರಕ್ಷಣೆಯ ಸಂದೇಶ ನೃತ್ಯ, ಕೊಡವ ಸಾಂಪ್ರದಾಯಿಕ ನೃತ್ಯ ಪ್ರದರ್ಶನ ನಡೆಯಲಿದೆ.

ತಾ.27ರ ಪೂರ್ವಾಹ್ನ 8.30 ಗಂಟೆಗೆ ಸಮಾವೇಶದ ಉದ್ಘಾಟನೆ ನಡೆಯಲಿದೆ. ಈ ಬಾರಿ ಸ್ಕಾಟ್ ಲ್ಯಾಂಡ್ ನಿವೃತ್ತ ಪೆÇಲೀಸ್ ಮುಖ್ಯಸ್ಥ ರೇ ಬರ್ಮನ್ ಅವರು ಸಮಾವೇಶವನ್ನು ಉದ್ಘಾಟಿಸಲಿದ್ದು, ರೋಟರಿ ಅಂತಾರಾಷ್ಟ್ರೀಯ ಅಧ್ಯಕ್ಷರ ಪ್ರತಿನಿಧಿಯಾಗಿ ತೈವಾನ್ ನಿಂದ ಡಾ|| ಪೆÇೀ ಜಂಗ್ ಲಿನ್ ಗೌರವ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದು ನುಡಿದರು.

ಮೂರು ದಿನಗಳ ಸಮಾವೇಶದಲ್ಲಿ ರೋಟರಿ ಸದಸ್ಯರಿಗಾಗಿ ಸಾಂಸ್ಕೃತಿಕ ಹಾಗೂ ಕ್ರೀಡಾ ಕಾರ್ಯಕ್ರಮಗಳೂ ನಡೆಯಲಿದ್ದು, ಇದರೊಂದಿಗೆ ವಿವಿಧ ವಿಷಯಗಳಲ್ಲಿ ಗಣ್ಯರು ತಮ್ಮ ಅನುಭವ ಗಳನ್ನು ಧಾರೆ ಎರೆಯಲಿದ್ದಾರೆ.

ಕೊಯಮತ್ತೂರಿನ ಹೆಸರಾಂತ ವೈದ್ಯ ಡಾ.ವೇಲುಮಣಿ ಅವರು ತಾನು ಶೂನ್ಯ ಬಂಡವಾಳದಿಂದ ಕೋಟ್ಯಾಧಿಪತಿಯಾಗಿರುವ ಬಗ್ಗೆ ಮಾಹಿತಿ ನೀಡಲಿದ್ದು, ರೈತರ ಕೃಷಿಯ ಬಗ್ಗೆ ಕೃಷಿ ವಿವಿಯ ವಿಶ್ರಾಂತ ಕುಲಪತಿ ಡಾ|| ಪಿ.ಜಿ.ಚಂಗಪ್ಪ ವಿಷಯ ಮಂಡಿಸಲಿದ್ದಾರೆ. ಮಾಧ್ಯಮ ತಜ್ಞೆ ವಾಸಂತಿ ಹರಿಪ್ರಸಾದ್ ಅವರು ಮಕ್ಕಳ ಭವಿಷ್ಯದ ಬಗ್ಗೆ ಮಾತನಾಡಲಿದ್ದು, ಎಡಿಜಿಪಿ ಭಾಸ್ಕರ ರಾವ್ ಅವರು ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸಾರ್ವಜನಿಕರ ಕರ್ತವ್ಯಗಳ ಬಗ್ಗೆ ಮಾಹಿತಿ ನೀಡಲಿದ್ದಾರೆ. ಕೊಡಗು ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಪಿ. ರಾಜೇಂದ್ರ ಪ್ರಸಾದ್ ಅವರು, ಸಂಚಾರ ವ್ಯವಸ್ಥೆಯ ಕುರಿತು ಮತ್ತು ಹಿರಿಯ ನ್ಯಾಯವಾದಿ, ಕರ್ನಾಟಕ ಬ್ಯಾಂಕ್ ನಿರ್ದೇಶಕ ಅಶೋಕ್ ಹಾರ್ನಳ್ಳಿ ಅವರು ವೃತ್ತಿಯಲ್ಲಿ ಮೌಲ್ಯಗಳ ಬಗ್ಗೆ ತಿಳಿ ಹೇಳಲಿದ್ದಾರೆ. ಇದರೊಂದಿಗೆ ಹಾಸ್ಯ ಕಲಾವಿದೆ ಸುಧಾ ಬರಗೂರು ಹಾಸ್ಯದ ಹೊನಲು ಹರಿಸಲಿದ್ದಾರೆ ಎಂದು ಸುರೇಶ್ ಚಂಗಪ್ಪ ಮಾಹಿತಿ ನೀಡಿದರು.

ಸಮಾವೇಶದ ಯಶಸ್ಸಿಗಾಗಿ ಈಗಾಗಲೇ ಸುಮಾರು 60 ಮಂದಿ ರೋಟರಿ ಸದಸ್ಯರು ತಮ್ಮನ್ನು ತೊಡಗಿಸಿಕೊಂಡಿದ್ದು, ಇದರೊಂದಿಗೆ ರೋಟರಿ ವಲಯ 6ರ 9 ಕ್ಲಬ್ ಗಳು ಸಹಯೋಗ ನೀಡುತ್ತಿವೆ ಎಂದು ಹೇಳಿದ ಅವರು, ರೋಟರಿ ಸಂಸ್ಥೆಯ ಈ ಬಾರಿ ಸ್ವಚ್ಛತೆ ಮತ್ತು ಪರಿಸರ ಸಂರಕ್ಷಣೆಗೆ ಒತ್ತು ನೀಡುತ್ತಿದ್ದು, ಈಗಾಗಲೇ ಶಾಲಾ ಕಾಲೇಜುಗಳಲ್ಲಿ ವಿದ್ಯಾಥಿ9ಗಳಿಗೆ ಸ್ವಚ್ಛತೆಯ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಇದರೊಂದಿಗೆ ರೋಟರಿ ಜಿಲ್ಲೆಯ ವ್ಯಾಪ್ತಿಯಲ್ಲಿ ಸುಮಾರು ಒಂದು ಲಕ್ಷ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಈಗಾಗಲೇ ಗುರಿ ಮೀರಿದ ಸಾಧನೆ ಮಾಡಲಾಗಿದೆ ಎಂದು ವಿವರಿಸಿದರು. ಸಮ್ಮೇಳನ ಸ್ಥಳದಲ್ಲಿ 15 ಕ್ಕೂ ಅಧಿಕ ಮಳಿಗೆಗಳನ್ನು ತೆರೆಯಲಾಗುತ್ತಿದ್ದು, ವೈವಿಧ್ಯಮಯ ಉತ್ಪನ್ನಗಳ ಪ್ರದರ್ಶನ, ಮಾರಾಟಕ್ಕೆ ಸಿದ್ದತೆ ಕೈಗೊಳ್ಳಲಾಗಿದೆ ಎಂದೂ ಸುರೇಶ್ ಚಂಗಪ್ಪ ನುಡಿದರು.

ಜಿಲ್ಲೆಯಲ್ಲಿ ಹತ್ತು ಹಲವಾರು ಕಾರ್ಯಕ್ರಮಗಳನ್ನು ರೋಟರಿ ಸಂಸ್ಥೆಗಳು ತಮ್ಮ ಕಾರ್ಯವ್ಯಾಪ್ತಿಯಲ್ಲಿ ನಡೆಸುತ್ತಿದ್ದು, ಅವುಗಳೆಲ್ಲವನ್ನೂ ಪರಸ್ಪರ ವಿನಿಮಯ ಮಾಡಿಕೊಳ್ಳು ವದು ಸಮಾವೇಶದ ಉದ್ದೇಶವಾಗಿದೆ. ಇದರೊಂದಿಗೆ ವಿಶ್ವಕ್ಕೆ ಒಳಿತನ್ನು ಮಾಡುವದೇ ರೋಟರಿಯ ಧ್ಯೇಯವಾಗಿದೆ ಎಂದು ಹೇಳಿದರು.

ತಾ.28ರಂದು ಪಲ್ಸ್ ಪೆÇೀಲಿಯೋ ದಿನವಾಗಿದ್ದು, ಅಂದು ಬೆಳಿಗ್ಗೆ ರೋಟರಿ ಅಂತಾರಾಷ್ಟ್ರೀಯ ಅಧ್ಯಕ್ಷರ ಪ್ರತಿನಿಧಿಯಾಗಿರುವ ಡಾ|| ಪೆÇೀ.ಜಂಗ್ ಲಿನ್ ಅವರು ಮಕ್ಕಳಿಗೆ ಪೆÇಲೀಯೋ ಲಸಿಕೆ ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಅಲ್ಲದೆ ಅಂದು ಭಾರತದ ಹೆಮ್ಮೆಯ ಸೇನಾನಿ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರ ಜನ್ಮದಿನವೂ ಆಗಿರುವದರಿಂದ ರೋಟರಿ ಸಂಸ್ಥೆ ವತಿಯಿಂದ ಅವರ ಜನ್ಮದಿನವನ್ನೂ ಆಚರಿಸಲಾಗುತ್ತದೆ ಎಂದರು.

ಸುದ್ದಿಗೋಷ್ಠಿಯಲ್ಲಿ ರೋಟರಿ ಜಿಲ್ಲೆಯ ಕಾರ್ಯದರ್ಶಿ ಎಂ. ಈಶ್ವರ ಭಟ್, ರೋಟರಿ ಮಡಿಕೇರಿ ಅಧ್ಯಕ್ಷ ಪಿ.ಎಂ. ಪ್ರೀತಂ, ಕಾರ್ಯದರ್ಶಿ ರತನ್ ತಮ್ಮಯ್ಯ, ರೋಟರಿ ಸಮ್ಮೇಳನದ ಅಧ್ಯಕ್ಷ ದೇವಣಿರ ಎಂ. ಕಿರಣ್ ಉಪಸ್ಥಿತರಿದ್ದರು. ಗೋಣಿಕೊಪ್ಪಲು, ಜ. 23: ನಗರದಲ್ಲಿ ಸುಗಮ ಸಂಚಾರ ಕಲ್ಪಿಸುವ ನಿಟ್ಟಿನಲ್ಲಿ ಗೋಣಿಕೊಪ್ಪಲು ನಗರದ ಮುಖ್ಯ ರಸ್ತೆ ಮತ್ತು ಬೈಪಾಸ್ ರಸ್ತೆಯನ್ನು ಉಪಯೋಗಿಸಿ ಏಕಮುಖ ಸಂಚಾರ ವ್ಯವಸ್ಥೆಯನ್ನು ಅಳವಡಿಸಲಾಗುವದು ಎಂದು ಗೋಣಿಕೊಪ್ಪಲಿನ ವೃತ್ತನಿರೀಕ್ಷಕÀ ಸಿ. ಯು. ದಿವಾಕರ್ ನುಡಿದರು.

ಅವರು ಗೋಣಿಕೊಪ್ಪಲು ಪೊಲೀಸ್ ಠಾಣೆಯಲ್ಲಿ ಗೋಣಿಕೊಪ್ಪಲಿನ ಸಂಚಾರ ಅವ್ಯವಸ್ಥೆ ಕುರಿತು ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಸಾರ್ವಜನಿಕರ, ಗ್ರಾಮ ಪಂಚಾಯಿತಿ ಸದಸ್ಯರ ಮತ್ತು ಚೇಂಬರ್ ಆಫ್ ಕಾಮರ್ಸ್‍ನ ಸದಸ್ಯರೊಂದಿಗೆ ನಡೆದ ಚರ್ಚೆಯ ನಂತರ ಮಾತನಾಡಿದರು. ನಿಲುಗಡೆ ನಿಷೇಧಿಸಲಾಗುವದು ಮುಂದಿನ ಹತ್ತು ದಿನಗಳಲ್ಲಿ ಏಕಮುಖ ಸಂಚಾರದ ವ್ಯವಸ್ಥೆಯನ್ನು ಮೂರು ತಿಂಗಳುಗಳ ಕಾಲ ಪ್ರಾಯೋಗಿಕವಾಗಿ ನಡೆಸಲಾಗು ವದು, ನಂತರ ಸಾಧಕ ಭಾದಕಗಳನ್ನು ಗಮನಿಸಿ ಸರಿಪಡಿಸಿಕೊಂಡು ಕ್ರಮಬದ್ಧವಾದ ಏಕಮುಖ ರಸ್ತೆ ವ್ಯವಸ್ಥೆ ಕಲ್ಪಿಸಲಾಗುವದು ಎಂದರು. ವೀರಾಜಪೇಟೆಯಿಂದ ನಗರವನ್ನು ಪ್ರವೇಶಿಸುವ ಎಲ್ಲ ವಾಹನಗಳು ಮುಖ್ಯ ರಸ್ತೆ ಮುಖಾಂತರ ಮತ್ತು ಮೈಸೂರು ಹಾಗೂ ಪೊನ್ನಂಪೇಟೆ ಕಡೆಯಿಂದ ನಗರವನ್ನು ಪ್ರವೇಶಿಸುವ ಎಲ್ಲ ವಾಹನಗಳು ಬೈಪಾಸ್ ರಸ್ತೆ ಮುಖಾಂತರ ಪ್ರಯಾಣಿಸುವಂತೆ ವ್ಯವಸ್ಥೆ ಮಾಡಲಾಗುವದು ಹಾಗೂ ಎಲ್ಲ ಜಂಕ್ಷನ್‍ಗಳಲ್ಲಿ ಇದಕ್ಕೆ ಸಂಬಂಧಿಸಿದಂತೆ ಹೆಚ್ಚುವರಿ ಪೊಲೀಸ್ ಪೇದೆಗಳ ವ್ಯವಸ್ಥೆಯನ್ನು, ಸೂಚನಾ ಫಲಕಗಳನ್ನು ಮತ್ತು ಬ್ಯಾರಿಕೇಡ್‍ಗಳನ್ನು ಅಳವಡಿಸಲಾಗು ವದು ಎಂದರು.

ಸಭೆಯಲ್ಲಿ ಉಪಸ್ಥಿತರಿದ್ದ ಕೇಶವ ಕಾಮತ್ ಮಾತನಾಡಿ, ಗೋಣಿಕೊಪ್ಪಲು ನಗರದಲ್ಲಿ ಅವ್ಯವಸ್ಥಿತ ಸಂಚಾರ ವ್ಯವಸ್ಥೆಯಿದ್ದು ಅದನ್ನು ಸರಿಪಡಿಸಿಕೊಳ್ಳದಿದ್ದಲ್ಲಿ ಮುಂದೆ ಗೋಣಿಕೊಪ್ಪಲಿನ ಎಲ್ಲ ವ್ಯವಹಾರಗಳಿಗೆ ತೊಂದರೆಯಾಗು ವದು, ನಗರದ ಮುಖ್ಯರಸ್ತೆಯನ್ನು ದಾಟಿಹೋಗ ಬೇಕಾದರೆ ಕೆಲವೊಮ್ಮೆ ಗಂಟೆಗಟ್ಟಲೆ ಟ್ರಾಫಿಕ್ ಜಾಮ್ ಆಗುತಿದೆ ಇದರಿಂದ ಎಲ್ಲರಿಗೂ ಸಮಸ್ಯೆಯಾಗುತ್ತಿದೆ. ವೀರಾಜಪೇಟೆಯಲ್ಲಿ ಅಳವಡಿಸಿರು ವಂತೆ ಏಕಮುಖ ಸಂಚಾರ ವ್ಯವಸ್ಥೆಯನ್ನು ಇಲ್ಲೂ ಅಳವಡಿಸಿ ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸುವಲ್ಲಿ ಪೊಲೀಸ್ ಇಲಾಖೆ ಚಿಂತಿಸಬೇಕಿದೆ ಎಂದರು. ಗೋಣಿಕೊಪ್ಪಲು ಗ್ರಾಮ ಪಂಚಾಯಿತಿ ಸದಸ್ಯೆ ರತಿ ಅಚ್ಚಪ್ಪ ಮಾತನಾಡಿ ಇದಕ್ಕೆ ಪೂರಕವಾಗಿ ಬೈಪಾಸ್ ರಸ್ತೆಯಲ್ಲಿ ಪಾರ್ಕಿಂಗ್ ಅವ್ಯವಸ್ಥಿತವಾಗಿದೆ ಅದನ್ನು ಸರಿಪಡಿಸಿ ನಂತರ ಏಕಮುಖ ಸಂಚಾರ ವ್ಯವಸ್ಥೆ ಮಾಡುವದು ಒಳ್ಳೆಯದು ಎಂದರು. ಗೋಣಿಕೊಪ್ಪಲು ಚೇಂಬರ್‍ನ ಉಪಾಧ್ಯಕ್ಷ ಪೊನ್ನಿಮಾಡ ಸುರೇಶ್ ಮಾತನಾಡಿ ಈ ಬಗ್ಗೆ ಈಗಾಗಲೆ ಎರಡು ವರ್ಷಗಳ ಹಿಂದೆ ನಡೆದ ಸಭೆಯಲ್ಲಿ ಚರ್ಚಿಸಲಾಗಿತ್ತು ಮತ್ತು ಚೇಂಬರ್‍ನಿಂದ ಸಂಬಂಧಪಟ್ಟ ಇಲಾಖೆಗಳಿಗೆ ಮನವಿಯನ್ನು ಕೂಡ ಅರ್ಪಿಸಲಾಗಿತ್ತು. ಆದರೆ ಅದು ಅನುಷ್ಠಾನಗೊಂಡಿಲ್ಲ ಈಗ ನೂತನವಾಗಿ ಬಂದಿರುವ ವೃತ್ತನಿರೀಕ್ಷಕರು ಈ ಬಗ್ಗೆ ಆಸ್ಥೆ ವಹಿಸಿ ಏಕಮುಖ ಸಂಚಾರ ವ್ಯವಸ್ಥೆ ಕಲ್ಪಿಸಬೇಕು ಎಂದರು. ಸಭೆಯಲ್ಲಿದ್ದ ಹಿರಿಯ ಉದ್ಯಮಿಗಳಾದ ಅಜಿತ್ ಅಯ್ಯಪ್ಪ ಮಾತನಾಡಿ ನೂತನ ಕಟ್ಟಡಗಳ ಮುಂಭಾಗದಲ್ಲಿರುವ ಸ್ಥಳಗಳಲ್ಲಿ ದ್ವಿಚಕ್ರ ವಾಹನ ಪಾರ್ಕಿಂಗ್ ವ್ಯವಸ್ಥೆಮಾಡಬೇಕು ಎಂದರು.

ಗೋಣಿಕೊಪ್ಪಲು ಗ್ರಾಮ ಪಂಚಾಯಿತಿ ಸದಸ್ಯ ಕುಲ್ಲಚಂಡ ಬೋಪಣ್ಣ ಮಾತನಾಡಿ ಏಕಮುಖ ಸಂಚಾರ ಅತ್ಯುತ್ತಮ ಸಲಹೆಯಾಗಿದೆ; ಈಗಾಗಲೆ ಈ ಬಗ್ಗೆ ಗ್ರಾಮಸಭೆಯಲ್ಲಿ ಚರ್ಚಿಸಿ ಗೋಣಿಕೊಪ್ಪಲು ನಗರದ ಸುಗಮ ಸಂಚಾರಕ್ಕೆ ಏಕಮುಖ ಸಂಚಾರ ವ್ಯವಸ್ಥೆ ಅಳವಡಿಸಬೇಕೆಂದು ಸರ್ವಾನುಮತದ ನಿರ್ಣಯವಾಗಿದೆ; ಅದನ್ನು ಕೂಡಲೇ ಪ್ರಾರಂಬಿಸಬೇಕು ಎಂದರು.

ಇನ್ನೋರ್ವ ಪಂಚಾಯಿತಿ ಸದಸ್ಯ ಕುಲ್ಲಚಂಡ ಪ್ರಮೋದ್ ಗಣಪತಿ ಮಾತನಾಡಿ ಏಕ ಮುಖ ಸಂಚಾರ ಉತ್ತಮ ವ್ಯವಸ್ಥೆಯೇ; ಆದರೆ ಅದಕ್ಕೆ ಪೂರಕವಾದ ರಸ್ತೆ ಮತ್ತು ಸೇತುವೆಗಳು ಇವೆಯೇ, ಬೃಹತ್ ವಾಹನಗಳು ಸಂಚರಿಸುವಾಗ ಸಮಸ್ಯೆಗಳಾಗಬ ಹುದೇ? ಎನ್ನುವದನ್ನು ದೀರ್ಘವಾಗಿ ಚಿಂತಿಸಿ ಕ್ರಮ ಕೈಗೊಳ್ಳಬೇಕು ಎಂದರು.

ವೇದಿಕೆಯಲ್ಲಿ ಉಪಸ್ಥಿತರಿದ್ದ ಗೋಣಿಕೊಪ್ಪಲು ಚೇಂಬರ್ ಅಧ್ಯಕ್ಷ ಸುನಿಲ್ ಮಾದಪ್ಪ ಮಾತನಾಡಿ ಇದು ಚೇಂಬರ್ ಹಲವಾರು ವರ್ಷಗಳ ಹಿಂದಿನ ಸಲಹೆಯಾಗಿದೆ ಆದರೆ ಅದು ಈಗ ಅಳವಡಿಕೆಯಾಗುತಿರುವದು ಉತ್ತಮವಾದ ಕಾರ್ಯವಾಗಿದೆ. ಅಲ್ಲದೆ ಬಸ್ಸುಗಳು ಬಸ್ಸುನಿಲ್ದಾಣದಿಂದ ಹೊರಟ ನಂತರ ಅಲ್ಲಲ್ಲಿ ನಿಂತು ಪ್ರಯಾಣಿಕರನ್ನು ಹತ್ತಿಸಿಕೊಳ್ಳುವ ವ್ಯವಸ್ಥೆಗೆ ಕಡಿವಾಣ ಹಾಕಬೇಕಿದೆ. ಮುಂದೆ ಎಲ್ಲಿ ಬಸ್ ನಿಲ್ಲಿಸಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳಬೇಕು ಎನ್ನುವುದನ್ನು ಇಲಾಖೆ ತೀರ್ಮಾನಿಸಿ ಬಸ್ ಸ್ಟಾಪ್ ನಿಗದಿಗೊಳಿಸಬೇಕು. ಏಕಮುಖ ಸಂಚಾರಕ್ಕೆ ಚೇಂಬರ್ ಆಫ್ ಕಾಮರ್ಸ್ ಸಂಪೂರ್ಣ ಬೆಂಬಲ ನೀಡಲಿದೆ ಎಂದರು.

ಕೊಡಗು ಚೇಂಬರ್ ಅಧ್ಯಕ್ಷ ಮತ್ತು ಗೋಣಿಕೊಪ್ಪಲು ಗ್ರಾಮ ಪಂಚಾಯಿತಿ ಸದಸ್ಯ ಬಿ. ಎನ್. ಪ್ರಕಾಶ್ ಮಾತನಾಡಿ ಹಲವಾರು ವರ್ಷಗಳಿಂದ ಸಂಚಾರ ವ್ಯವಸ್ಥೆ ಅವ್ಯವಸ್ಥಿತವಾಗಿದ್ದು ಸುಗಮ ಸಂಚಾರಕ್ಕೆ ಏಕಮುಖ ರಸ್ತೆ ವ್ಯವಸ್ಥೆ ಉತ್ತಮ ಅಭಿಪ್ರಾಯವಾಗಿದೆ. ಹಲವಾರು ಜನರ ಚಿಂತನೆ ಮತ್ತು ಕೋರಿಕೆ ಕೈಗೂಡುವ ಸಮಯ ಬಂದಿದೆ. ಇಂದಿನ ಸಭೆಯಲ್ಲಿ ಸರ್ವಾನುಮತದಿಂದ ಏಕಮುಖ ರಸ್ತೆಗೆ ಒಪ್ಪಿಗೆ ದೊರಕಿದೆ ಎನ್ನುವದನ್ನು ದಾಖಲಿಸಿ ಕಾರ್ಯನಿರ್ವಹಿಸಬೇಕು ಎಂದರು.

ಠಾಣಾಧಿಕಾರಿ ಹೆಚ್.ವೈ. ರಾಜು ಮಾತನಾಡಿ ಇದು ಉತ್ತಮ ಸಲಹೆ ಯಾದರೂ ಇದಕ್ಕೆ ಪೂರಕವಾದ ಪೊಲೀಸ್ ಪೇದೆಗಳ ಅವಶ್ಯವಿದೆ ಅದರ ವ್ಯವಸ್ಥೆ ಕೂಡಲೇ ಮಾಡಲು ಹಿರಿಯ ಅಧಿಕಾರಿಗಳಾದ ವೃತ್ತನಿರೀಕ್ಷಕರು ವ್ಯವಸ್ಥೆ ಮಾಡಬೇಕು ಎಂದರು. ಚೇಂಬರ್ ಕಾರ್ಯದರ್ಶಿ ಕಾಶಿ, ಮರ್ಚೆಂಟ್ ಬ್ಯಾಂಕ್ ಅಧ್ಯಕ್ಷ ಕಿರಿಯಮಾಡ ಅರುಣ್ ಪೂಣಚ್ಚ, ಗ್ರಾ. ಪಂ. ಸದಸ್ಯ ರಾಮಕೃಷ್ಣ, ಮುಖ್ಯ ಪೇದೆ ಎಂ.ಕೆ ಪೂವಣ್ಣ ಸಾಧಕ ಭಾದಕಗಳ ಬಗ್ಗೆ ಮಾತನಾಡಿದರು. ಗೋಣಿಕೊಪ್ಪಲು ಗ್ರಾಮ ಪಂಚಾಯಿತಿ ಅಭಿವೃಧ್ದಿ ಅಧಿಕಾರಿ ಚಂದ್ರಮೌಳಿ, ಗ್ರಾಮ ಪಂಚಾಯಿತಿ ಸದಸ್ಯರಾದ ರಾಜಶೇಖರ್, ಮಂಜುಳ, ಯಾಸ್ಮಿನ್, ಮುರುಘ, ಚೇಂಬರ್ ಸದಸ್ಯರಾದ ಮನೋಹರ್, ಉಮ್ಮರ್, ವಕೀಲ ಸಂಜೀವ್, ವರ್ತಕರಾದ ಟಿ.ಕೆ ಬಾಬು ಕುಮಾರಸ್ವಾಮಿ, ವೆಂಕಟೇಶ್ ರೈ, ಶಂಕರ್, ಹೆಚ್ ವಿ ಕೃಷ್ಣಪ್ಪ, ವೇದಿಕೆಯಲ್ಲಿ ಗೋಣಿಕೊಪ್ಪಲು ಗ್ರಾಮಪಂಚಾಯಿತಿ ಅಧ್ಯಕ್ಷೆ ಸೆಲ್ವಿ ಉಪಸ್ಥಿತರಿದ್ದರು.