ಮಡಿಕೇರಿ, ಜ. 23: ಮಡಿಕೇರಿಯ ನೆಹರು ಯುವ ಕೇಂದ್ರ, ತಾಲೂಕು ಯುವ ಒಕ್ಕೂಟ ಹಾಗೂ ಗಾಳಿಬೀಡು ಯುವಕ ಸಂಘ ಮತ್ತು ವರದಾ ಯುವಕ ಸಂಘದ ಸಂಯುಕ್ತ ಆಶ್ರಯದಲ್ಲಿ ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆಯ ಅಂಗವಾಗಿ ರಾಷ್ಟ್ರೀಯ ಯುವ ಸಪ್ತಾಹ ಕಾರ್ಯಕ್ರಮ ನಡೆಸಲಾಯಿತು.

ಗಾಳಿಬೀಡುವಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಕಾಡು ಕಡಿದು ಶ್ರಮದಾನ ನಡೆಸಿದವು. ಮಡಿಕೇರಿ ತಾಲೂಕು ಯುವ ಒಕ್ಕೂಟದ ಅಧ್ಯಕ್ಷ ನವೀನ್ ದೇರಳ ಕಾರ್ಯಕ್ರಮ ವನ್ನುದ್ದೇಶಿಸಿ ಮಾತನಾಡಿದರು. ಗಾಳಿಬೀಡು ಯುವಕ ಸಂಘದ ಅಧ್ಯಕ್ಷ ಯು.ಎನ್. ಗಿರೀಶ್ ಹಾಗೂ ವರದಾ ಯುವಕ ಸಂಘದ ಪದಾಧಿಕಾರಿಗಳು ಪಾಲ್ಗೊಂಡಿದ್ದರು.