ಮಡಿಕೇರಿ, ಜ. 23: ಎಂಟನೇ ರಾಷ್ಟ್ರೀಯ ಮತದಾರರ ದಿನಾಚರಣೆಯ ಅಂಗವಾಗಿ ಕೊಡಗು ಜಿಲ್ಲಾ ಪಂಚಾಯತ್ ಮತ್ತು ವಿದ್ಯಾ ಇಲಾಖೆ ನಡೆಸಿದ ಜಿಲ್ಲಾಮಟ್ಟದ ಮತದಾರರ ಜಾಗೃತಿ ಕುರಿತ ಸ್ಪರ್ಧೆಗಳಲ್ಲಿ ಜಿಲ್ಲೆಯಿಂದ ಒಂಭತ್ತು ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕಿ ಭಾಗ್ಯ ತಿಳಿಸಿದ್ದಾರೆ.
ಇತ್ತೀಚೆಗೆ ನಡೆಸಿದ ಜಿಲ್ಲಾಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಆಂಗ್ಲ ಮಾಧ್ಯಮ ಪ್ರೌಢಶಾಲಾ ವಿಭಾಗದಲ್ಲಿ ಸಂತ ಜೋಸೆಫರ ಶಾಲೆಯ ಅಂಜಲಿ ಅನಂತಶಯನ ಪ್ರಥಮ, ಕನ್ನಡ ಮಾಧ್ಯಮದಲ್ಲಿ ಸಂತ ಮೈಕಲರ ಪ್ರೌಢಶಾಲೆಯ ಚಶ್ಮಿತ ಕೆ.ಸಿ. ಪ್ರಥಮ, ಕನ್ನಡ ಪದವಿಪೂರ್ವ ವಿಭಾಗದ ಪ್ರಬಂಧ ಸ್ಪರ್ಧೆಯಲ್ಲಿ ಸಂತ ಜೋಸೆಫರ ಪ.ಪೂ. ಕಾಲೇಜಿನ ಚಂದನ ಕೆ.ಎನ್., ಆಂಗ್ಲ ಮಾಧ್ಯಮದಲ್ಲಿ ಸಂತ ಜೋಸೆಫರ ಪದವಿಪೂರ್ವ ಕಾಲೇಜಿನ ದೀಪಾ ಎ.ಬಿ., ಪದವಿ ವಿಭಾಗದ ಪ್ರಬಂಧ ಸ್ಪರ್ಧೆ, ಕನ್ನಡ ವಿಭಾಗದಲ್ಲಿ ಕುಶಾಲನಗರ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಲಿನ್ಸಿ ಆರ್., ಆಂಗ್ಲ ಮಾಧ್ಯಮದಲ್ಲಿ ಎಫ್.ಎಂ.ಸಿ. ಕಾಲೇಜಿನ ಕಾವೇರಮ್ಮ ಎಸ್.ಬಿ., ಪೋಸ್ಟರ್ ಸ್ಪರ್ಧೆಯಲ್ಲಿ ಗೋಣಿಕೊಪ್ಪ ಲಯನ್ಸ್ ಪ್ರೌಢಶಾಲೆಯ ನಿಶ್ಚಿತ ಕೆ.ಎಂ., ಪದವಿಪೂರ್ವ ವಿಭಾಗದ ಪೋಸ್ಟರ್ ಸ್ಪರ್ಧೆಯಲ್ಲಿ ಸಂತ ಜೋಸೆಫರ ಪ.ಪೂ. ಕಾಲೇಜಿನ ದರ್ಶಿನಿ ಡಿ.ಎಸ್., ಪದವಿ ವಿಭಾಗದಲ್ಲಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಂತೋಷ್ ರಾಂ, ಪ್ರೌಢಶಾಲಾ ಕೊಲಾಜಸ್ ಸ್ಪರ್ಧೆಯಲ್ಲಿ ವೀರಾಜಪೇಟೆ ಸಂತ ಅನ್ನಮ್ಮ ಶಾಲೆಯ ವಸುಧಾ ಸಿ.ಟಿ., ಪದವಿಪೂರ್ವ ವಿಭಾಗದಿಂದ ಸರಕಾರಿ ಪ.ಪೂ. ಕಾಲೇಜಿನ ಯಶ್ವಂತ್ ಎಂ.ವಿ., ಪದವಿ ವಿಭಾಗದಿಂದ ಕುಶಾಲನಗರ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಉಪೇಂದ್ರ ಪ್ರಥಮ ಸ್ಥಾನಕ್ಕೇರಿದ್ದು, ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ವಿವಿಧ ಜಿಲ್ಲೆಗಳ ವಿಜೇತರ ಪ್ರಬಂಧಗಳನ್ನು ರಾಜ್ಯಮಟ್ಟದಲ್ಲಿ ಅವಲೋಕಿಸಿ ಬಹುಮಾನಿತರ ಹೆಸರನ್ನು ಬಳಿಕ ಘೋಷಿಸಲಾಗುತ್ತದೆ.