ಮಡಿಕೇರಿ, ಜ. 23: ಕರ್ನಾಟಕ ಸಾಂಸ್ಕøತಿಕ ಅಕಾಡೆಮಿ ವತಿಯಿಂದ ನಾಡು, ನುಡಿಗೆ ಸೇವೆಗೈದವರಿಗೆ ಗೌರವ ಅರ್ಪಿಸುವ ಸಮಾರಂಭವನ್ನು ಬೆಂಗಳೂರಿನಲ್ಲಿ ಹಮ್ಮಿಕೊಂಡಿದ್ದು, ಈ ಪ್ರಯುಕ್ತ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಕರ್ನಾಟಕ ಭೂಷಣ, ಸಹಕಾರ ರತ್ನ, ಸಮಾಜ ಸೇವಾ ರತ್ನ, ಕನ್ನಡ ಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗುವದು.

ಶಿಕ್ಷಣ, ನೃತ್ಯ, ಸಂಗೀತ, ಸಂಸ್ಕøತಿ, ಕೃಷಿ, ಕೈಗಾರಿಕೆ, ಕಾನೂನು, ಪರಿಸರ, ಸಮಾಜಸೇವೆ, ಸಂಶೋಧನೆ, ಕುಸ್ತಿಪಟು, ವೈದ್ಯಕೀಯ ಸೇವೆ, ಸಾಹಿತ್ಯ ಕ್ಷೇತ್ರ, ಜನನಾಯಕ, ಭಾರತ ಭೂಷಣ, ವಿಶ್ವಚೇತನ, ಉದ್ಯಮ, ಕ್ರೀಡೆ, ರಂಗಭೂಮಿ, ಚಲನವಿತ್ರ, ಕಿರುತೆರೆ, ಆಡಳಿತ, ಪತ್ರಿಕೋದ್ಯಮ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಪೊಲೀಸ್ ಸೇವೆ, ಗುಡಿ ಕೈಗಾರಿಕೆ, ನಾಡು-ನುಡಿ, ಜನಪರ ಹೋರಾಟ, ಉದ್ಯೋಗ ಸಥಷ್ಟಿ, ಕೋಮು ಸಾಮರಸ್ಯ ಮುಂತಾದ ಇತರ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಸಾಧಕರು ಹಾಗೂ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಅರ್ಹ ಸ್ತ್ರೀ-ಪುರುಷರು ಹಾಗೂ ಮಕ್ಕಳು ತಮ್ಮ ಬಯೋಡೆಟಾ, ಸಾಧನೆಯನ್ನು ಗುರುತಿಸಿರುವ ಸರ್ಟಿಫಿಕೇಟ್‍ಗಳೊಂದಿಗೆ ತಮ್ಮ ಇತ್ತೀಚಿನ ಭಾವಚಿತ್ರಗಳನ್ನು ತಾ. 25 ರೊಳಗೆ ತಲಪುವಂತೆ ಈ ವಿಳಾಸಕ್ಕೆ ಕಳುಹಿಸಬೇಕೆಂದು ಕೋರಲಾಗಿದೆ. ಅಧ್ಯಕ್ಷರು, ಪ್ರೊ. ಜಿ.ಬಿ. ರಾಜು, ಕರ್ನಾಟಕ ಸಾಂಸ್ಕøತಿಕ ಅಕಾಡೆಮಿ, ನಂ. 1199, 6ನೇ ಮುಖ್ಯ ರಸ್ತೆ, 2ನೇ ಹಂತ, ಎ ಬ್ಲಾಕ್, ರಾಜಾಜಿನಗರ, ಬೆಂಗಳೂರು - 5600010 ಮೊಬೈಲ್: 9731988437, 9035845566.