ಮಡಿಕೇರಿ, ಜ. 22: ಭಾರತ ಸರ್ಕಾರ, ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ, ನೆಹರು ಯುವಕೇಂದ್ರ ಮಡಿಕೇರಿ, ರಾಷ್ಟ್ರೀಯ ಸೇವಾ ಯೋಜನೆ, ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು, ಸಂಯುಕ್ತ ಆಶ್ರಯದಲ್ಲಿ ನೆರೆಹೊರೆ ಯುವಜನ ಸಂಸತ್ತು ಕಾರ್ಯಕ್ರಮ ನಡೆಯಿತು. ಉದ್ಘಾಟನೆಯನ್ನು ಪಿ.ಎಸ್. ಪ್ರಕಾಶ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಿಗಂತ ಮುದ್ರಣ ಮಂಗಳೂರು ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಅನಂತಪ್ಪ, ಜಿಲ್ಲಾ ಯುವಜನ ಸಮನ್ವಯಾಧಿಕಾರಿ, ನೆಹರು ಯುವ ಕೇಂದ್ರ, ಕೆ.ಕೆ. ಕುಂಞಪ್ಪ, ಅಧ್ಯಕ್ಷರು, ಬೇಂಗ್‍ನಾಡ್ ಕೊಡವ ಸಮಾಜ, ಬಿ.ಬಿ. ಗಣಪತಿ, ಕಾರ್ಯದರ್ಶಿ, ಬೇಂಗ್‍ನಾಡ್ ಕೊಡವ ಸಮಾಜ ಹಾಗೂ ಅಧ್ಯಕ್ಷತೆಯನ್ನು ಡಾ. ಶ್ರೀಧರ್ ಹೆಗ್ಡೆ, ಉಪನ್ಯಾಸಕರು, ಹಿಂದಿ ವಿಭಾಗ ಇವರು ವಹಿಸಿದ್ದರು. ಡಾ. ನರಸಿಂಹ ಸಹಾಯಕ ಪ್ರಾಧ್ಯಾಪಕರು ಸಮುದಾಯ ವೈದ್ಯ ವಿಭಾಗ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಮಡಿಕೇರಿ ಇವರು ಉಪನ್ಯಾಸ ನೀಡಿದರು. ನವೀನ್ ದೇರಳ ಅಧ್ಯಕ್ಷರು ತಾಲೂಕು ಯುವ ಒಕ್ಕೂಟ ಇವರುಗಳು ಮಾತನಾಡಿದರು. ಕಾರ್ಯಕ್ರಮವನ್ನು ಮೋಕ್ಷ ರೈ ನಿರೂಪಿಸಿ, ಡಾ. ಮಾಧವ್ ಸ್ವಾಗತಿಸಿ, ವಂದಿಸಿದರು.

ನಾಪೋಕ್ಲು: ರಾಷ್ಟ್ರೀಯ ಯುವದಿನಾಚರಣೆ ಅಂಗವಾಗಿ ನಾಪೋಕ್ಲು ಸರ್ಕಾರಿ ಕಾಲೇಜಿನ ವಿದ್ಯಾರ್ಥಿಗಳು ಪಟ್ಟಣದಲ್ಲಿ ಮೆರವಣಿಗೆ ನಡೆಸಿದರು. ಪ್ರಬಾರ ಪ್ರಾಂಶುಪಾಲೆ ಕಾವೇರಿ ಹಾಗೂ ಉಪನ್ಯಾಸಕರು ಇದ್ದರು.