ಮಡಿಕೇರಿ, ಜ. 19: ನಗರದ ಜನರಲ್ ತಿಮ್ಮಯ್ಯ ವೃತ್ತದ ಬಳಿ ಮುದ್ದು ಕಾಂಪ್ಲೆಕ್ಸ್‍ನಲ್ಲಿ ಇಂದು ಕೊಡಗು ಜಿಲ್ಲಾ ಬಿಜೆಪಿಯ ನೂತನ ಕಚೇರಿ ಪ್ರಾರಂಭಗೊಳ್ಳುವದರೊಂದಿಗೆ ಗಣಪತಿ ಹೋಮ ನಡೆಸಲಾಯಿತು.

ಬಿಜೆಪಿ ಜಿಲ್ಲಾಧ್ಯಕ್ಷ ಬಿ.ಬಿ. ಭಾರತೀಶ್ ಮುಂದಾಳತ್ವದಲ್ಲಿ ಜರುಗಿದ ಪೂಜಾ ಕೈಂಕರ್ಯದಲ್ಲಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್, ಪಕ್ಷದ ಪದಾಧಿಕಾರಿಗಳಾದ ರವಿಕುಶಾಲಪ್ಪ, ವಿ.ಕೆ. ಲೋಕೇಶ್, ಬಾಲಚಂದ್ರ ಕಳಗಿ, ರವಿಕಾಳಪ್ಪ, ಅರುಣ್ ಕುಮಾರ್, ಕಾಂಗೀರ ಸತೀಶ್, ಕಾಳನ ರವಿ, ಮೋಂತಿ ಗಣೇಶ್, ಉಷಾ ತೇಜಸ್ವಿ, ಭಾರತಿ ರಮೇಶ್, ಉಷಾ ದೇವಮ್ಮ, ಕೊಲ್ಲಿರ ಧರ್ಮಜ, ಎಂ.ಬಿ. ಅಭಿಮನ್ಯುಕುಮಾರ್, ಜಿ.ಎಲ್. ನಾಗರಾಜ್, ಡೀನ್ ಬೋಪಣ್ಣ, ಮಹೇಶ್ ಜೈನಿ, ಅನಿತಾ ಪೂವಯ್ಯ, ಪಿ.ಟಿ. ಉನ್ನಿಕೃಷ್ಣ, ಜಗದೀಶ್ ಕುಮಾರ್ ಎಂ.ಬಿ. ದೇವಯ್ಯ, ಕೋಡಿಪೊನ್ನಪ್ಪ ಸೇರಿದಂತೆ ವಿವಿಧೆಡೆಯಿಂದ ಕಾರ್ಯಕರ್ತರು, ಹಿರಿಯರು ಆಗಮಿಸಿ ಪರಸ್ಪರ ಹರ್ಷ ಹಂಚಿಕೊಳ್ಳುತ್ತಿದ್ದರು.