ನಾಪೋಕ್ಲು, ಜ. 19: ಕೊಡಗು ಜಲ್ಲಾ ನಾಯಿಬ್ ಖಾಝಿ ಶೈಖುನಾ ಮಹ್ಮೂದ್ ಉಸ್ತಾದ್ ಅವರು ಧ್ವಜಾರೋಹಣ ಮಾಡುವದರ ಮೂಲಕ ಕೊಟ್ಟಮುಡಿ ಮರ್ಕಝುಲ್ ಹಿದಾಯ ಕ್ಯಾಂಪಸ್‍ನಲ್ಲಿ ಎಸ್‍ಎಸ್‍ಎಫ್ ರಾಜ್ಯ ಮಟ್ಟದ ಪ್ರತಿಭೋತ್ಸವಕ್ಕೆ ಚಾಲನೆ ನೀಡಲಾಯಿತು.
ಕರ್ನಾಟಕ ರಾಜ್ಯ ಎಸ್‍ಎಸ್‍ಎಫ್ ಅಧ್ಯಕ್ಷ ಇಸ್ಮಾಯಿಲ್ ಸಖಾಫಿ ಅವರ ಅಧ್ಯಕ್ಷತೆಯಲ್ಲಿ ರಾಜ್ಯ ಸುನ್ನೀ ಮ್ಯಾನೇಜ್‍ಮೆಂಟ್ ಅಸೋಸಿಯೇಶನ್ ಅಧ್ಯಕ್ಷ ಸಯ್ಯಿದ್ ಜಲಾಲುದ್ದೀನ್ ಅಲ್‍ಹಾದಿ ಮಲ್ಜಅï ಪ್ರತಿಭೋತ್ಸವವನ್ನು ಉದ್ಘಾಟಿಸಿದರು.
ನಂತರ ಸಯ್ಯಿದ್ ಉಮರ್ ಅಸ್ಸಖಾಫ್ ಮನ್ಶರ್‍ರವರ ನೇತೃತ್ವದಲ್ಲಿ ನಡೆದ ಆಧ್ಯಾತ್ಮಿಕ ಸಂಗಮದಲ್ಲಿ ನೌಫಲ್ ಸಖಾಫಿ ಕಳಸ ಭಾಷಣ ಮಾಡಿದರು. ವೇದಿಕೆಯಲ್ಲಿ ರಾಜ್ಯ ಎಸ್‍ಎಸ್‍ಎಫ್ ಉಪಾಧ್ಯಕ್ಷ ಸಯ್ಯಿದ್ ಹಾಮೀಂ ಶಿಹಾಬ್ ತಂಙಳ್ ಚಿಕ್ಕಮಗಳೂರು, ಅಬೂಸುಫಿಯಾನ್ ಇಬ್ರಾಹಿಂ ಮದನಿ ಮೂಡಬಿದ್ರೆ, ಎಸ್.ವೈ.ಎಸ್ ಜಿಲ್ಲಾಧ್ಯಕ್ಷ ಹಫೀಳ್ ಸಅದಿ ಕೊಳಕೇರಿ, ರಾಜ್ಯ ಕೋಶಾಧಿಕಾರಿ ಶರೀಫ್ ಬೆಂಗಳೂರು, ಕೊಡಗು ಜಿಲ್ಲಾ ಸಂಯುಕ್ತ ಜಮಾಅತ್ ಅಧ್ಯಕ್ಷ ಹುಸೈನ್ ಸಖಾಫಿ ಎಮ್ಮೆಮಾಡು, ಕಾರ್ಯದರ್ಶಿ ಮೊಯ್ದೀನ್ ಕುಟ್ಟಿ ಹಾಜಿ ಕೊಳಕೇರಿ, ಸುನ್ನಿ ಜಂಇಯ್ಯತುಲ್ ಮುಅಲ್ಲಿಮೀನ್ ಜಿಲ್ಲಾಧ್ಯಕ್ಷ ಕೆ.ಎಸ್. ಶಾದುಲಿ ಫೈಝಿ, ಕಾರ್ಯದರ್ಶಿ ಹಂಝ ಅನ್ವರಿ ಹುಂಡಿ, ಅನ್ವಾರುಲ್ ಹುದಾ ಕಾರ್ಯದರ್ಶಿ ಅಶ್ರಫ್ ಅಹ್ಸನಿ ವೀರಾಜಪೇಟೆ, ಎಸ್ಸೆಸ್ಸೆಫ್ ಕೊಡಗು ಜಿಲ್ಲಾ ಅಧ್ಯಕ್ಷ ಕರೀಂ ಫಾಝಿಲಿ, ಕಾರ್ಯದರ್ಶಿ ರಫೀಖ್ ನೆಲ್ಯಹುದಿಕೇರಿ, ಮರ್ಕಝ್ ಕಾರ್ಯದರ್ಶಿ ಮುಹಮ್ಮದ್ ಹಾಜಿ ಕುಂಜಿಲ, ಮರ್ಕಝ್ ಪಬ್ಲಿಕ್ ಸ್ಕೂಲ್ ಅಧ್ಯಕ್ಷ ಅಬ್ದುಲ್ಲ ಕೊಟ್ಟಮುಡಿ, ನಾಪೋಕ್ಲು ಸೆಂಟರ್ ಎಸ್.ವೈ.ಎಸ್. ಅಧ್ಯಕ್ಷ ಅಬ್ದುಲ್ಲ ಸಖಾಫಿ ಕೊಳಕೇರಿ, ಮರ್ಕಝ್ ದಅïವಾ ಕಾಲೇಜು ಪ್ರಾಂಶುಪಾಲ ಶಿಹಾಬ್ ನೂರಾನಿ ಸೇರಿದಂತೆ ಇತರ ಗಣ್ಯರು ಉಪಸ್ಥಿತರಿದ್ದರು. ರಾಜ್ಯ ಪ್ರತಿಭೋತ್ಸವ ಕನ್ವೀನರ್ ಸುಫಿಯಾನ್ ಸಖಾಫಿ ಕಾವಳಕಟ್ಟೆ ಸ್ವಾಗತಿಸಿ, ಇಸ್ಮಾಯಿಲ್ ಝೈನಿ ಕೊಂಡಂಗೇರಿ ವಂದಿಸಿದರು. -ದುಗ್ಗಳ ಸದಾನಂದ