ವೀರಾಜಪೇಟೆ, ಜ. 18: ರಾಜ್ಯ ಸರ್ಕಾರದ ಎಸ್ಇಟಿಎಸ್ಪಿ ಯೋಜನೆ ಅಡಿಯಲ್ಲಿ ಬಲ್ಲಚಂಡ ಹರಿಜನ ಕಾಲೋನಿಯಲ್ಲಿ ಅಂದಾಜು ರೂ. 10 ಲಕ್ಷ ವೆಚ್ಚದಲ್ಲಿ 213 ಮೀಟರ್ ಕಾಂಕ್ರಿಟ್ ರಸ್ತೆಗೆ ತಾಲೂಕು ಪಂಚಾಯಿತಿ ಸದಸ್ಯ ಮಾಳೇಟ್ಟಿರ ಪ್ರಶಾಂತ್ ನೇರವೆರಿಸಿದರು.ಇದೇ ಸಂದರ್ಭ ಕಾಕೋಟು ಪರಂಬು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮೋಹಿನಿ, ಉಪಾಧ್ಯಕ್ಷೆ ಮುಕ್ಕಾಟ್ಟಿರ ಕಾವೇರಮ್ಮ, ಸದಸ್ಯರಾದ ಮಂಡೇಟ್ಟಿರ ಅನಿಲ್ ಅಯ್ಯಪ್ಪ, ಗ್ರಾಮಸ್ಥರಾದ ಬಲ್ಲಚಂಡ ಕಂಬು, ಡಾಲಿ, ಬಲ್ಲಟ್ಟಿಕಾಳಂಡ ರಂಜಿ ಮಾದಪ್ಪ, ಮಂಡೆಪಂಡ ರೋಷನ್, ಕಾಂಗೀರ ಸತೀಶ್ ಸೇರಿದಂತೆ ಹಲವಾರು ಕಾರ್ಯಕರ್ತರು ಉಪಸ್ಥಿತರಿದ್ದರು.
ಎರಡು ಬಾರಿ ಭೂಮಿಪೂಜೆ: ಇದೆ ಕಾಂಕ್ರೀಟ್ ರಸ್ತೆಗೆ ಬೆಳಿಗ್ಗೆ ತಾಲೂಕು ಪಂಚಾಯಿತಿ ಸದಸ್ಯ ಮಾಳೇಟ್ಟಿರ ಪ್ರಶಾಂತ್ ಉತ್ತಪ್ಪ ಭೂಮಿ ಪೂಜೆ ನಡೆಸಿದರೆ ಅಪರಾಹ್ನ ವೀರಾಜಪೇಟೆ ಶಾಸಕ ಕೆ.ಜಿ ಬೋಪಯ್ಯ ಅವರು ಕೂಡ ಭೂಮಿ ಪೂಜೆ ನಡೆಸಿದ್ದಾರೆ. ಎರಡು ರಾಜಕೀಯ ಪಕ್ಷಗಳ ಮೇಲಾಟದಲ್ಲಿ ಕಾಲೋನಿ ಜನರು ಬೆಳಿಗ್ಗಿನಿಂದ ಸಂಜೆಯವರೆಗೆ ಲವಲವಿಕೆಯಿಂದ ಭೂಮಿಪೂಜೆಯಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.