ಮಡಿಕೇರಿ, ಜ. 18: ಬಹುಜನ ಸಮಾಜ ಪಾರ್ಟಿಯ ನಾಯಕಿ ಮಾಯಾವತಿ ಅವರ ಜನ್ಮದಿನವಾದ ತಾ. 15ರಿಂದ 26ರ ಸಂವಿಧಾನ ದಿನಾಚರಣೆವರೆಗೆ ಬಹುಜನ ಸಮಾಜ ಪಾರ್ಟಿ ಹಮ್ಮಿಕೊಂಡಿರುವ ಪ್ರಜಾಪ್ರಭುತ್ವ ಉಳಿಸುವ ಕಡೆಗೆ ಆನೆಯ ನಡಿಗೆ ರ್ಯಾಲಿ ಅಂಗವಾಗಿ ರಾಜ್ಯಾದ್ಯಂತ ಹಮ್ಮಿಕೊಂಡಿರುವ ಜಾಥಾ ಇಂದು ನಗರಕ್ಕೆ ಆಗಮಿಸಿತು.
ಇಲ್ಲಿನ ಫಿ.ಮಾ. ಕಾರ್ಯಪ್ಪ ವೃತ್ತದಲ್ಲಿ ಪಾರ್ಟಿಯ ಜಿಲ್ಲಾಧ್ಯಕ್ಷ ಪ್ರೇಂಕುಮಾರ್ ಹಾಗೂ ಕಾರ್ಯ ಕರ್ತರು ಬರಮಾಡಿ ಕೊಂಡರು. ನಂತರ ಜ. ತಿಮ್ಮಯ್ಯ ವೃತ್ತದಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಮಾತ ನಾಡಿದ ರಾಜ್ಯ ನಾಯಕ ಮಹೇಶ್ ರಾಷ್ಟ್ರೀಯ ಪಕ್ಷಗಳು ಶ್ರೀಮಂತರ ಪರ ವಾಗಿವೆ. ಸಂವಿಧಾನ ಪ್ರಜಾಪ್ರಭುತ್ವಕ್ಕೆ ಮನ್ನಣೆ ನೀಡುತ್ತಿಲ್ಲ. ಸಂವಿಧಾನದಲ್ಲಿ ಬಡವರಿಗೂ ಸಮಾನತೆ ನೀಡ ಬೇಕೆಂದಿದ್ದರೂ ಪಾಲಿಸುತ್ತಿಲ್ಲ. ನ್ಯಾಯಾಧೀಶರುಗಳೇ ಮಾಧ್ಯಮ ದೆದರು ಅಳಲು ತೊಡಿ ಕೊಂಡಿರು ವದು ಇದಕ್ಕೆ ಸಾಕ್ಷಿಯಾಗಿದೆ. ಈ ನಿಟ್ಟಿನಲ್ಲಿ ಪ್ರಜಾಪ್ರಭುತ್ವ ಹಾಗೂ ಸಂವಿಧಾನದ ಬಗ್ಗೆ ಜಾಗೃತಿ ಮೂಡಿ ಸುವ ನಿಟ್ಟಿನಲ್ಲಿ ರಾಜ್ಯಾದ್ಯಂತ ರ್ಯಾಲಿ ಹಮ್ಮಿಕೊಂಡಿರುವದಾಗಿ ಹೇಳಿದರು. ನಂತರ ರ್ಯಾಲಿ ಮುಂದಕ್ಕೆ ಸಾಗಿತು.