ನಾಪೋಕ್ಲು, ಜ. 18: ಪೆರಾಜೆ ಗ್ರಾಮದ ವಿವಿಧ ಭಾಗಗಳಲ್ಲಿ ರಸ್ತೆ ಅಭಿವೃದ್ಧಿಗಾಗಿ ಮುಖ್ಯಮಂತ್ರಿ ಮತ್ತು ಎಂಎಲ್‍ಸಿ ಅನುದಾನದಡಿಯಲ್ಲಿ 60ಲಕ್ಷ ರೂ ಮಂಜೂರಾಗಿದ್ದು, ಅದರ ಕಾಮಗಾರಿಗಳಿಗೆ ಭೂಮಿಪೂಜೆಯನ್ನು ಎಂಎಲ್‍ಸಿ ವೀಣಾ ಅಚ್ಚಯ್ಯ ನೆರವೇರಿಸಿದರು.
ಈ ಸಂದರ್ಭ ಪೆರಾಜೆ ವಲಯ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸುರೇಶ್ ಪೆರುಮುಂಡ, ನಾಪೊಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮಾನಾಥ ಬೇಕಲ್, ಕೊಡಗು ಜಿಲ್ಲಾ ಯುವಕಾಂಗ್ರೆಸ್ ಅಧ್ಯಕ್ಷ ಹನೀಫ್ ಸಂಪಾಜೆ, ಕಾಂಗ್ರೆಸ್ ಮುಖಂಡರಾದ ಕದ್ದಣಿಯಂಡ ಹರೀಶ್ ಬೋಪಣ್ಣ, ಪಿ.ಎಂ.ಬೋಜಪ್ಪ, ಪಿ.ಎಸ್.ಮನು ಪೆರುಮುಂಡ, ಪಿ.ಎನ್.ಅಬೂಬಕ್ಕರ್, ಸಿಹಾಬ್, ಅಶೋಕ್ ಪಣೇಲ, ವಿಶ್ವನಾಥ ಬಿ.ಆರ್, ಪುರುಷೋತ್ತಮ ಬಂಗಾರಕೋಡಿ, ವಿವೇಕಾನಂದ ಎಂ.ಆರ್, ಪ್ರೇಮಚಂದ್ರ, ಪಾಶ್ರ್ವನಾಥ, ಪೈಝಲ್, ಸಂಪಾಜೆ ವಲಯ ಕಾಂಗ್ರೆಸ್ ಅಧ್ಯಕ್ಷ ಸುರೇಶ್ ಸಂಪಾಜೆ ಉಪಸ್ಥಿತರಿದ್ದರು.
ಮಾಯಲಕೋಟೆ-ಕುದುಕುಳಿ ರಸ್ತೆ ಅಭಿವೃದ್ಧಿ 4ಲಕ್ಷ, ದೊಡ್ಡಡ್ಕ-ನೆಡ್ಚಿಲ್ ರಸ್ತೆ ಅಭಿವೃದ್ಧಿಗೆ 4ಲಕ್ಷ, ಬಂಗಾರಕೋಡಿ ರಸ್ತೆ ಅಭಿವೃದ್ಧಿಗೆ 4ಲಕ್ಷ, ತೊಕ್ಕುಳಿ-ಪಣೇಲ ರಸ್ತೆ ಅಭಿವೃದ್ಧಿಗೆ 4ಲಕ್ಷ, ಕನ್ನಡ ಪೆರಾಜೆ-ಬಿಳಿಯಾರು ರಸ್ತೆ ಅಭಿವೃದ್ಧಿಗೆ 4 ಲಕ್ಷ, ಕುಂಡಾಡು ಬೈರುನಾಯ್ಕ ಮನೆಹತ್ತಿರ ವಿಷ್ಣುಮೂರ್ತಿ ದೈವಸ್ಥಾನ ರಸ್ತೆ ಅಭಿವೃದ್ಧಿಗೆ 4ಲಕ್ಷ, ಕುಂಡಾಡು ಸುಬ್ರಾಯನಾಯ್ಕ ಮನೆಹತ್ತಿರದಿಂದ ಕುಂಡಾಡು ಶಾಲೆ ರಸ್ತೆ ಅಭಿವೃದ್ಧಿಗೆ 20ಲಕ್ಷ, ತೆಂಗಿನಡಿ ರಸ್ತೆ ಅಭಿವೃದ್ಧಿಗೆ 20ಲಕ್ಷ ಅನುದಾನ ಎಂಎಲ್‍ಸಿ ಮತ್ತು ಮುಖ್ಯಮಂತ್ರಿ ವಿಶೇಷ ನಿಧಿಯಿಂದ ಅನುದಾನ ಮಂಜೂರುಗೊಂಡಿದೆ.
- ದುಗ್ಗಳ