ಗೋಣಿಕೊಪ್ಪ ವರದಿ, ಜ. 18: ರಾಷ್ಟ್ರೀಯ ಹಿರಿಯ ಪುರುಷರ ಹಾಕಿ ಟೂರ್ನಿಯ ಕ್ವಾರ್ಟರ್ ಫೈನಲ್‍ನಲ್ಲಿ ಸೋಲನುಭವಿಸಿರುವ ಹಾಕಿ ಕೂರ್ಗ್ ತಂಡವು ಪಂದ್ಯಾವಳಿಯಿಂದ ಹೊರ ಬಿದ್ದಿದೆ.

ಹಾಕಿ ಇಂಡಿಯಾ ಸಹಯೋಗದಲ್ಲಿ ಮಣಿಪುರದ ಇಂಪಾಲದಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ನವದೆಹಲಿ ಸೆಂಟ್ರಲ್ ಸೆಕ್ಟರ್‍ಟ್ರೈಟ್ ವಿರುದ್ಧ 2-4 ಗೋಲುಗಳ ಅಂತರದಿಂದ ಸೋಲನುಭವಿಸಿತು.

ಕೊಡಗಿನ ಆಟಗಾರ ಪುಲಿಯಂಡ ತಿಮ್ಮಣ್ಣ ಅವರ ಅಮೋಘ ಆಟ ಹಾಕಿ ಕೂರ್ಗ್ ತಂಡಕ್ಕೆ ಮುಳುವಾಯಿತು. ನವದೆಹಲಿ ಸೆಂಟ್ರಲ್ ಸೆಕ್ಟರ್‍ಟ್ರೈಟ್ ತಂಡದ ಪರ ಆಟವಾಡಿದ ಪುಲಿಯಂಡ 7, 20, 25 ನೇ ನಿಮಿಷಗಳಲ್ಲಿ ತಿಮ್ಮಣ್ಣ ಹ್ಯಾಟ್ರಿಕ್ ಗೋಲು ಹೊಡೆಯುವ ಮೂಲಕ ಹಾಕಿ ಕೂರ್ಗ್ ಸೋಲಿನಲ್ಲಿ ಪ್ರಮುಖ ಪಾತ್ರವಹಿಸಿದರು. 53 ನೇ ನಿಮಿಷದಲ್ಲಿ ಪಾಟೀಲ್ ಶಂಕರ್ 1 ಗೋಲು ಹೊಡೆದು ಪ್ರೋತ್ಸಾಹ ನೀಡಿದರು. ದ್ವಿತಿಯಾರ್ಧದಲ್ಲಿ ಹಾಕಿ ಕೂರ್ಗ್ ಪರ 37 ಹಾಗೂ 45 ನೇ ನಿಮಿಷಗಳಲ್ಲಿ ಆರ್. ರಾಹುಲ್ ಪೆನಾಲ್ಟಿ ಕಾರ್ನರ್‍ನ್ನು ಗೋಲಾಗಿ ಪರಿವರ್ತಿಸುವ ಕೂರ್ಗ್ ತಂಡಕ್ಕೆ ನೆರವಾದರು.

ಆಟಗಾರರುಗಳಾದ ಹೆಚ್.ಟಿ. ಸಂಜಯ್, ಐ.ಇ. ಪಳಂಗಪ್ಪ, ಡಿ.ಎಂ. ಅಚ್ಚಯ್ಯ, ಆರ್. ರಾಹುಲ್, ಅರ್. ಪುನೀತ್, ಕೆ.ಸಿ. ಬೋಪಣ್ಣ, ರೋಹನ್ ತಿಮ್ಮಯ್ಯ, ಪಿ.ಪಿ. ಬೆಳ್ಯಪ್ಪ, ಐ.ಎ. ಪೂವಣ್ಣ, ವಸಂತ್ ಕುಮಾರ್, ಎಸ್. ನಾಗೇಶ್, ಎಂ.ಎಂ. ಅಚ್ಚಯ್ಯ, ಮೈಂದಪಂಡ ಬಿ. ಕಾರ್ಯಪ್ಪ, ಮುತ್ತಾಗರ್ ಹರೀಶ್, ಕೆ.ಪಿ. ಸೋಮಣ್ಣ, ಜೆ. ಚೇತನ್, ಶಿವಾನಂದ್, ಮೋಕ್ಷಿತ್ ಉತ್ತಪ್ಪ ಹಾಗೂ ಬಿ.ಎಸ್. ವೆಂಕಟೇಶ್, ತಂಡದ ವ್ಯವಸ್ಥಾಪಕರಾಗಿ ಬೊಳ್ಳಂಡ ರೋಶನ್, ತರಬೇತುದಾರರಾಗಿ ಬಿ. ಎಸ್. ವೆಂಕಟೇಶ್ ಕಾರ್ಯನಿರ್ವಹಿಸಿದರು.