ಮಡಿಕೇರಿ, ಜ. 18: ತೋಟದೊಳಗೆ ಅಡಿಕೆ ಕೊಯ್ಯುತ್ತಿದ್ದ ಸಂದರ್ಭ ವಿದ್ಯುತ್ ಸ್ಪರ್ಶಗೊಂಡು ವ್ಯಕ್ತಿಯೋರ್ವರು ದಾರುಣವಾಗಿ ಮೃತಪಟ್ಟಿರುವ ಘಟನೆ ಇಲ್ಲಿಗೆ ಸಮೀಪದ ಬೆಟ್ಟಗೇರಿಯಲ್ಲಿ ನಡೆದಿದೆ. ಬೆಟ್ಟಗೇರಿ ಗ್ರಾಮದ ಕಟ್ರತಂಡ ರಮೇಶ್ ಮುತ್ತಪ್ಪ ಎಂಬವರೇ ಮೃತ ದುರ್ದೈವಿ. ತೋಟದಲ್ಲಿ ಹಾದು ಹೋಗಿದ್ದ ವಿದ್ಯುತ್ ತಂತಿಗೆ ಕಬ್ಬಿಣದ ಪೈಪ್ ತಗುಲಿದ ಪರಿಣಾಮ ವಿದ್ಯುತ್ ವಿದ್ಯುತ್ ಸ್ಪರ್ಶ ವ್ಯಕ್ತಿ ದುರ್ಮರಣ ಸ್ಪರ್ಶಿಸಿದ್ದರಿಂದ ದುರ್ಘಟನೆ ನಡೆದಿದೆ. ಮಧ್ಯಾಹ್ನವಾದರೂ ಮನೆಗೆ ಆಗಮಿಸದೇ ಇದ್ದಾಗ ಗಾಬರಿಗೊಂಡ ಮಗಳು ತೋಟಕ್ಕೆ ತೆರಳಿದಾಗ ತಂದೆ ಮೃತಪಟ್ಟಿರುವ ವಿಷಯ ತಿಳಿದುಬಂದಿದೆ. ಮೃತರು ಪತ್ನಿ, ಓರ್ವ ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ. ಜಿಲ್ಲಾಸ್ಪತ್ರೆಯ ಶವಗಾರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಮೃತ ದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು. ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಈ ಕುರಿರು ಪ್ರಕರಣ ದಾಖಲಾಗಿದೆ.