ಮಡಿಕೇರಿ, ಜ. 18: ಹಿರಿಯ ಮುಖ್ಯಕಾರ್ಯದರ್ಶಿ ರಾಮೇಶ್ವರ್ ಸಿಂಗ್ ಐ.ಎ.ಎಸ್. (ನಿವೃತ್ತ) ಇವರ ನೇತೃತ್ವದ 5 ಜನ ಸದಸ್ಯರ ರಾಷ್ಟ್ರ ಮಟ್ಟದ 3ನೇ ಕಾಮನ್ ರಿವ್ಯೂ ಮಿಷನ್ ತಂಡ ಮಾದರಿ ಪಂಚಾಯತಿಗಳ ಭೇಟಿ ಹಾಗೂ ಯಶಸ್ವಿ ಕಾರ್ಯಕ್ರಮಗಳ ಅನುಷ್ಠಾನ ಅಧ್ಯಯನ ಹಾಗೂ ಪರಿವೀಕ್ಷಣೆಗಾಗಿ ಪಾಲಿಬೆಟ್ಟ ಗ್ರಾಮ ಪಂಚಾಯತಿಗೆ ಭೇಟಿ ನೀಡಿದ್ದರು. ಪಂಚಾಯತ್ ಕಾರ್ಯ ನಿರ್ವಹಣೆ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ತಂಡದಲ್ಲಿ ಇಗ್ನೋ ವಿಶ್ವವಿದ್ಯಾಲಯದ ಪ್ರೊ. ಕೆ.ಸಿ. ಸಮಲ್ ಗ್ರಾಮೀಣಾ ಭಿವೃಧ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ನಿರ್ದೇಶಕ ಕೆಂಪೇಗೌಡ, ಯಾಲಕ್ಕಿಗೌಡ, ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯ ಶಶಿಧರ ಇವರುಗಳು ಹಾಜರಿದ್ದರು.
ಕೊಡಗು ಜಿಲ್ಲಾ ಪಂಚಾಯತ್ ಸಿಇಓ ಪ್ರಶಾಂತ್ ಕುಮಾರ್ ಮಿಶ್ರ ಇವರು ಪವರ್ ಪಾಯಿಂಟ್ ಪ್ರಸೆಂಟೇಶನ್ ಮೂಲಕ ತಂಡಕ್ಕೆ ಮಾಹಿತಿ ನೀಡಿದರು. ತಂಡವು ಗ್ರಾಮೀಣ ಪ್ರದೇಶದ ವಿವಿಧ ಯೋಜನೆ ಫಲಾನುಭವಿಗಳೊಂದಿಗೆ ಸಂವಾದ ನಡೆಸಿದರು. ಯಶಸ್ವಿ ಆಡಳಿತದ ಕುರಿತು ಪಂಚಾಯತಿ ಅಧ್ಯಕ್ಷ ಪುಲಿಯಂಡ ಬೋಪಣ್ಣ ಹಾಗೂ ಸದಸ್ಯರೊಂದಿಗೆ ಚರ್ಚಿಸಿದರು.
ಜಿಲ್ಲೆ, ತಾಲೂಕು ಮಟ್ಟದ ಅಧಿಕಾರಿಗಳಿಂದ ವಿವಿಧ ಕೇಂದ್ರ ಪುರಸ್ಕøತ ಯೋಜನೆಗಳ ಮಾಹಿತಿ ಪಡೆದುಕೊಂಡರು. ಈ ಸಂದÀರ್ಭ ಗ್ರಾಮ ಪಂಚಾಯತಿ ಉಪಾಧ್ಯಕ್ಷರು ಸರ್ವ ಸದಸ್ಯರು ಪಿಡಿಓ, ಕಾರ್ಯದರ್ಶಿ ಹಾಗೂ ಸಿಬ್ಬಂದಿವರ್ಗ ಹಾಜರಿದ್ದು ಪಂಚಾಯತಿಯ ವೈಜ್ಞಾನಿಕ ತ್ಯಾಜ್ಯ ನಿರ್ವಹಣೆ, ಶುದ್ಧ ಕುಡಿಯುವ ನೀರಿನ ಘಟಕ, ಬಾಪೂಜಿ ಸೇವಾಕೇಂದ್ರ, ಡಿಜಿಟಲ್ ಲೈಬ್ರರಿ ಮತ್ತು ವಿವಿಧ ಯೋಜನೆಗಳ ಅನುಷ್ಠಾನ ಕುರಿತು ಮಾಹಿತಿ ಪಡೆದು ಕ್ಷೇತ್ರ ಮಟ್ಟದ ಪರಿಶೀಲನೆ ಕೈಗೊಂಡರು. ಜಿ.ಪಂ. ಸಹಾಯಕ ಕಾರ್ಯದರ್ಶಿ ಶ್ರೀಕಂಠಮೂರ್ತಿ, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಬಿ.ವಿ. ಜಯಣ್ಣ, ಶಿಷ್ಟಾಚಾರ ಅಧಿಕಾರಿ ಸುನಿಲ್ ಕುಮಾರ್, ಪಂಚಾಯಿತಿ ಅಧಿಕಾರಿ ಅಬ್ದುಲ್ಲಾ ಮೊದಲಾದವರು ಹಾಜರಿದ್ದರು.