ಸಿದ್ದಾಪುರ, ಜ. 18: ವೀರಾಜಪೇಟೆ ತಾಲೂಕು ಬಾಳಲೆ ಹೋಬಳಿಯಲ್ಲಿ ಪರವಾನಗಿ ಇಲ್ಲದೆ ಅಕ್ರಮವಾಗಿ ನಡೆಸುತ್ತಿದ್ದ ಇಟ್ಟಿಗೆ ಕಾರ್ಖಾನೆ ಮೇಲೆ ದಾಳಿ ಮಾಡಿ, ಅಕ್ರಮವಾಗಿ ಸಂಗ್ರಹಿಸಲಾಗಿದ್ದ ಇಟ್ಟಿಗೆಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಲಾಯಿತು. ಅಲ್ಲದೆ ಬೀಳೂರು ಗ್ರಾಮದ ಹೊಳೆದಡದಲ್ಲಿ ಅಕ್ರಮ ಮರುಳು ತೆಗೆಯುತ್ತಿದ್ದ ಸಂದರ್ಭ ಧಾಳಿ ಮಾಡಿ, 3 ತೆಪ್ಪ ಹಾಗೂ 2 ಲೋಡ್ ಮರಳನ್ನು ವಶಪಡಿಸಿಕೊಳ್ಳಲಾಯಿತು. ಈ ಸಂದರ್ಭ ತಹಶೀಲ್ದಾರ್ ಆರ್. ಗೋವಿಂದ ರಾಜು ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿ ನಾಗೇಂದ್ರ ಮತ್ತು ಬಾಳಲೆಯ ಹೋಬಳಿ ಉಪ ತಹಶೀಲ್ದಾರ್ ರಾಧಾಕೃಷ್ಣನ್ ಹಾಗೂ ಕಂದಾಯ ಪರಿವೀಕ್ಷಕ ಹರೀಶ್ ಹಾಜರಿದ್ದರು.